ಶನಿವಾರ, ಮೇ 21, 2022
19 °C

ಕೋರ್ಸ್‌ ಕಾರ್ನರ್‌: ಡೇಟಾ ಅನಾಲಿಟಿಕ್ಸ್ ಕಲಿಕೆಗೆ ಅನ್‌ಲೈನ್ ಕೋರ್ಸ್

ಗುರುರಾಜ್ ಎಸ್ ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಆರ್ಥಿಕ ವ್ಯವಹಾರ ತಜ್ಞರು ಜಗತ್ತಿನಾದ್ಯಂತ ಲಭ್ಯವಿರುವ ದತ್ತಾಂಶವನ್ನು ‘ನ್ಯೂ ಆಯಿಲ್’ ಎನ್ನುತ್ತಾರೆ. ಪ್ರಪಂಚದ ತುಂಬ ಪ್ರತಿಯೊಂದರ ಕುರಿತು ಅಗಾಧ ಮಾಹಿತಿ ಇದೆ. ಸರಿಯಾದುದನ್ನು ಆಯ್ದು, ವಿಶ್ಲೇಷಿಸಿ ಬಳಸುವುದನ್ನು ಹೇಳಿಕೊಡುವ ಶಿಕ್ಷಣ ಪ್ರಾಕಾರಕ್ಕೆ ಡೇಟಾ ಅನಾಲಿಟಿಕ್ಸ್ ಅಥವಾ ಬಿಗ್ ಡೇಟಾ ಅನಾಲಿಟಿಕ್ಸ್ ಎನ್ನುತ್ತಾರೆ.

ವಿಶ್ವದ 730 ಕೋಟಿ ಜನರನ್ನೂ ಏಕಕಾಲಕ್ಕೆ ಒಂದೇ ವೇದಿಕೆಗೆ ತರಬಲ್ಲ ತಾಕತ್ತಿರುವ ಇಂಟರ್‌ನೆಟ್‌ ಅಗಾಧ ಮಾಹಿತಿ ಹೊಂದಿದೆ. ಮಾಹಿತಿಯನ್ನು ಅವಶ್ಯಕತೆ ಮತ್ತು ಅದ್ಯತೆಗಳ ಮೇಲೆ ಕ್ರೋಡೀಕರಿಸಿ ಉಪಯೋಗಿಸಿದರೆ ಅಭಿವೃದ್ಥಿಯ ಎಲ್ಲ ಕೆಲಸಗಳೂ ಸಲೀಸು. ಅದಕ್ಕೆಂದೇ ಉನ್ನತ ಶಿಕ್ಷಣ ನೀಡುವ ಕೋಯಿಕ್ಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿದೆ.

ವಿದ್ಯಾರ್ಹತೆ ಕೌಶಲ ಮತ್ತು ಅನುಭವ

ವಿದ್ಯಾರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದಾದರೂ ವಿಶ್ವ ವಿದ್ಯಾಲಯದ ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕು.

ಶುದ್ಧ ಹಾಗೂ ಅನ್ವಯಿಕ ಗಣಿತ ಎರಡರಲ್ಲೂ ಪರಿಣತಿ, ಪ್ರಮಾಣಿತ ಪ್ರಶ್ನೆ ಭಾಷೆ (Standardized Query language -SQL) ಗಳಾದ, ಹೈವ್ (Hive), ಪಿಗ್, ಸ್ಕ್ರಿಪ್ಟಿಂಗ್‌ ಲಾಂಗ್ವೇಜ್ ಪೈಥಾನ್, ಹಡೂಪ್, ಮೆಶೀನ್ ಲರ್ನಿಂಗ್, ಮ್ಯಾಟ್‌ಲ್ಯಾಬ್, ಮೈಕ್ರೋಸಾಫ್ಟ್‌ನ ಎಕ್ಸೆಲ್ ಹಾಗೂ ಆರ್ - ಪ್ರೋಗ್ರಾಮಿಂಗ್ ಲಾಂಗ್ವೇಜ್‌ಗಳನ್ನು ಬಳಸಿ ಒಂದು ವರ್ಷ ಕೆಲಸ ಮಾಡಿರಬೇಕು. ಜೊತೆಗೆ ಸಮಸ್ಯೆ ಬಿಡಿಸುವ ಕೌಶಲ, ಕ್ರಿಟಿಕಲ್ ಥಿಂಕಿಂಗ್ ಹಾಗೂ ಶ್ರಮವಹಿಸಿ ದುಡಿಯುವ ಸಾಮರ್ಥ್ಯ ಎಲ್ಲವೂ ಇದ್ದರೆ ಡೇಟಾ ಅನಾಲಿಟಿಕ್ಸ್‌ನ ಕೆಲಸ ಸುಲಭವಾಗುತ್ತದೆ.

ಕೋರ್ಸ್‌ ಅವಧಿ: 10 ತಿಂಗಳು ಕೋರ್ಸ್ ಪ್ರಾರಂಭದ ದಿನಾಂಕ: 26 ಡಿಸೆಂಬರ್ 2021 ತರಗತಿ ಸಮಯ: ಪ್ರತಿ ಭಾನುವಾರ ಸಂಜೆ 6.45 - 9.30 ರ ವರೆಗೆ (ಲೈವ್ ತರಗತಿಗಳು) ಶುಲ್ಕ: ₹1.95 ಲಕ್ಷ + ಜಿ ಎಸ್‌ಟಿ. ಮೂರು ಕಂತುಗಳಲ್ಲಿ ಶುಲ್ಕ ಭರಿಸಬಹುದು. ಐಐಎಂ ಕೋಯಿಕ್ಕೋಡ್‌ನ ಪ್ರಾಧ್ಯಾಪಕರು, ಡೇಟಾ ಕೈಗಾರಿಕೋದ್ಯಮ ನಡೆಸುವ ಪರಿಣತರು ಆನ್‌ಲೈನ್‌ನ ಒಟ್ಟು 10 ಮಾಡ್ಯೂಲ್‌ಗಳಲ್ಲಿ ಇಡೀ ಕೋರ್ಸ್‌ ಕಲಿಸುತ್ತಾರೆ.

ಯಾರಿಗೆ ಅನುಕೂಲ?

ದೊಡ್ಡ ರಿಟೇಲ್‌ಚೈನ್, ಹಡಗು ನಿರ್ಮಾಣ, ವಿಮಾನಯಾನ, ಪ್ರವಾಸೋದ್ಯಮ, ಬ್ಯಾಂಕಿಂಗ್, ಇ-ಕಾಮರ್ಸ್, ಡಿಫೆನ್ಸ್, ಹಣಕಾಸು, ಆರೋಗ್ಯ ಕ್ಷೇತ್ರ, ಆಮದು ಮತ್ತು ರಫ್ತು, ಸರ್ಕಾರಿ ಹಾಗೂ ಸಾಫ್ಟ್‌ಉದ್ಯಮ, ಆನ್‌ಲೈನ್ ಶಿಕ್ಷಣ, ಮಾರಾಟ ಜಾಲಗಳಿಗೆ ಡೇಟಾ ಅನಾಲಿಟಿಕ್ಸ್ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತದೆ. ಮೆಕೆನ್ಜೀ ಅಂತರಾಷ್ಟಿಯ ಸಂಸ್ಥೆಯ ಪ್ರಕಾರ 2023 ರ ವೇಳೆಗೆ ಅಮೆರಿಕಾದಲ್ಲಿ ಡೇಟಾ ಅನಾಲಿಟಿಕ್ಸ್ ಕ್ಷೇತ್ರದಲ್ಲಿ 20 ಲಕ್ಷ ಹುದ್ದೆಗಳು ಸೃಷ್ಟಿಯಾಗಲಿವೆ. ಫೋರ್ಬ್ಸ್ ವರದಿಯಂತೆ ಭಾರತದಲ್ಲಿ ಪ್ರತಿ ತಿಂಗಳು 3000 ಡೇಟಾ ಅನಾಲಿಸ್ಟ್ ಹುದ್ದೆಗಳು ಸೃಷ್ಟಿಯಾಗುತ್ತಿವೆ. 3 ರಿಂದ 10 ವರ್ಷಗಳ ಅನುಭವ ಇರುವವರಿಗೆ ವಾರ್ಷಿಕ ₹ 25 ಲಕ್ಷ ರಿಂದ ₹65 ಲಕ್ಷ ವೇತನವಿದೆ.

ಹೆಚ್ಚಿನ ಮಾಹಿತಿಗೆ : iimk.eruditus.com 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು