ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಯಿಂದ ಎಸ್ಸೆಸ್ಸೆಲ್ಸಿ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ: ಎಸ್ಸೆಸ್ಸೆಲ್ಸಿಯಲ್ಲಿ ಶೇ 85ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಿಗಾಗಿ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 3,20,000 ಅಥವಾ ಕಡಿಮೆ ಆಗಿರಬೇಕು.

ಆರ್ಥಿಕ ಸಹಾಯ: ಮಾರ್ಗದರ್ಶನ ಬೆಂಬಲ, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಹೊರಾಂಗಣ ಭೇಟಿಗಳ ಜತೆಗೆ ತಿಂಗಳಿಗೆ ₹3,500 ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಕೊನೆ ದಿನ: 15-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/KJSP2

ಸ್ವಾಮಿ ವಿವೇಕಾನಂದ ಸ್ಕಾಲರ್ಷಿಪ್

ಸ್ವಾಮಿ ವಿವೇಕಾನಂದ್ ಸ್ಕಾಲರ್ಷಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್ ಸ್ಕೀಮ್ ಪದವಿಪೂರ್ವ, ಸ್ನಾತಕೋತ್ತರ ಪದವಿ, ಪಿಎಚ್ಡಿ ಮತ್ತು ವಿದೇಶದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನಾ ಕೋರ್ಸ್ಗಳನ್ನು ಮುಂದುವರಿಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವೇತನವಾಗಿದೆ.

ಅರ್ಹತೆ: ಯುಜಿ, ಪಿಜಿ, ಪಿಎಚ್.ಡಿ ಅಥವಾ ಪೋಸ್ಟ್ ಡಾಕ್ಟರಲ್ ಕೋರ್ಸ್ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಆರ್ಥಿಕ ವರ್ಷದ ಜುಲೈ 1ಕ್ಕೆ ಅನ್ವಯವಾಗುವಂತೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿದಾರರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು ನಿರ್ದಿಷ್ಟ ಆದಾಯದ ಮಾನದಂಡಗಳನ್ನು ಪೂರೈಸಬೇಕು.

ಆರ್ಥಿಕ ಸಹಾಯ: ₹1,00,000ದ ವರೆಗಿನ ಮಾಸಿಕ ಜೀವನ ವೆಚ್ಚಗಳು ಮತ್ತು ಇತರ ಪ್ರಯೋಜನಗಳು

ಅರ್ಜಿ ಸಲ್ಲಿಸಲು ಕೊನೆ ದಿನ: 15-01-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/RGAE1

ಟೋಫೆಲ್ ಇಂಡಿಯಾ

ಇದು ಇಟಿಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಉಪಕ್ರಮವಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂದು ಕನಸು ಹೊತ್ತಿರುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ನೀಡುವ ಸಹಾಯವಾಗಿದೆ.

ಅರ್ಹತೆ: ಪ್ರಸ್ತುತ ಪದವಿಪೂರ್ವ ಅಧ್ಯಯನದ 3ನೇ ಅಥವಾ 4 ನೇ ವರ್ಷಕ್ಕೆ ದಾಖಲಾಗಿರಬೇಕು.

ಭಾರತದಲ್ಲಿ ತಮ್ಮ ಪದವಿಪೂರ್ವ ಅಥವಾ ಪದವಿ ಅಧ್ಯಯನವನ್ನು ಪೂರ್ಣಗೊಳಿಸಿ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಬಯಸುತ್ತಿರುವವರಾಗಿರಬೇಕು. ಎರಡು ವರ್ಷಗಳವರೆಗೆ ನುರಿತ ವೃತ್ತಿಪರ ಕೆಲಸದ ಅನುಭವ ಹೊಂದಿರಬೇಕು.

ಆರ್ಥಿಕ ಸಹಾಯ: ಒಟ್ಟು ₹15 ಲಕ್ಷ
ಅರ್ಜಿ ಸಲ್ಲಿಸಲು ಕೊನೆ ದಿನ: 31-07-2024

ಹೆಚ್ಚಿನ ಮಾಹಿತಿಗೆ: Short Url: www.b4s.in/praja/TOIC1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.