ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಟಾಟಾ ಕ್ಯಾಪಿಟಲ್ ಪಂಖ್

Published 30 ಜೂನ್ 2024, 23:47 IST
Last Updated 30 ಜೂನ್ 2024, 23:47 IST
ಅಕ್ಷರ ಗಾತ್ರ

ಟಾಟಾ ಕ್ಯಾಪಿಟಲ್ ಪಂಖ್

ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಉಪಕ್ರಮವಾಗಿದ್ದು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕನಸುಗಳನ್ನು ಈಡೇರಿಸಿಕೊಳ್ಳಲು ಹಣಕಾಸಿನ ನೆರವನ್ನು ನೀಡುವ ಗುರಿ ಹೊಂದಿದೆ.

ಅರ್ಹತೆ: ಪ್ರಸ್ತುತ 11, 12ನೇ ತರಗತಿಗಳಲ್ಲಿರುವ, ಸಾಮಾನ್ಯ ಪದವಿ (ಬಿ.ಕಾಂ., ಬಿ.ಎಸ್‌ಸಿ, ಬಿಎ ಇತ್ಯಾದಿ), ಡಿಪ್ಲೊಮಾ ಮತ್ತು ಐಟಿಐ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.

ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ₹ 10 ರಿಂದ ₹ 12 ಸಾವಿರ ಅಥವಾ ಕೋರ್ಸ್ ಶುಲ್ಕದ ಶೇ 80ರಷ್ಟು ಪೂರೈಕೆ

ಅರ್ಜಿ ಸಲ್ಲಿಸಲು ಕೊನೆ ದಿನ: 15-09-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಹೆಚ್ಚಿನ ಮಾಹಿತಿಗೆ: www.b4s.in/praja/TCPS27

ಕೋಟಕ್ ಲೈಫ್ ಇನ್ಶೂರೆನ್ಸ್

ವಾಣಿಜ್ಯ ವಿಭಾಗದಲ್ಲಿ ತಮ್ಮ ಸ್ನಾತಕಪೂರ್ವ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಹಕಾರವನ್ನು ನೀಡಲು ಕೋಟಕ್ ಲೈಫ್ ಇನ್ಶೂರೆನ್ಸ್ ಕಂಪನಿ ಹಮ್ಮಿಕೊಂಡಿರುವ ಯೋಜನೆಯಾಗಿದೆ.

ಅರ್ಹತೆ: ನಿರ್ದಿಷ್ಟ ಕಾಲೇಜುಗಳಲ್ಲಿ ದಾಖಲಾಗಿರುವ ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ ಶೇ 65ರಷ್ಟು ಅಂಕ ಗಳಿಸಿರಬೇಕು. ವಾರ್ಷಿಕ ಆದಾಯ ₹ 3,60,000ದ ಮಿತಿಯಲ್ಲಿರಬೇಕು.

ಆರ್ಥಿಕ ಸಹಾಯ: ₹ 30,000

ಅರ್ಜಿ ಸಲ್ಲಿಸಲು ಕೊನೆ ದಿನ: 31-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/KLISP2

ಆಧಾರ್ ಕೌಶಲ್

ಅಂಗವಿಕಲ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಎಚ್‌ಎಫ್‌ಎಲ್) ನೀಡುವ ಅವಕಾಶವಾಗಿದೆ.

ಅರ್ಹತೆ: ಭಾರತದಾದ್ಯಂತ ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳಲ್ಲಿ ಓದುತ್ತಿರುವ ಅಂಗವಿಕಲ ವಿದ್ಯಾರ್ಥಿಗಳು ಅರ್ಹರು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. ₹ 2.5- 3 ಲಕ್ಷದಷ್ಟು ಒಟ್ಟು ವಾರ್ಷಿಕ ಕುಟುಂಬದ ಆದಾಯ ಹೊಂದಿರುವ ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆರ್ಥಿಕ ಸಹಾಯ: ₹ 10,000 ರಿಂದ ₹ 50,000 ವಿದ್ಯಾರ್ಥಿ ವೇತನ.

ಅರ್ಜಿ ಸಲ್ಲಿಸಲು ಕೊನೆ ದಿನ: 23-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/AKSP1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT