ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಪ್‌ ಇಂಡಿಯಾ ಸ್ಮೈಲಿಂಗ್‌ ಫೌಂಡೇಷನ್‌ ವಿದ್ಯಾರ್ಥಿ ವೇತನ

Last Updated 14 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಕೀಪ್‌ ಇಂಡಿಯಾ ಸ್ಮೈಲಿಂಗ್‌ ಫೌಂಡೇಷನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22

l ವಿವರ: ಹತ್ತನೇ ತರಗತಿಯ ನಂತರದ ಓದಿಗೆ ಸಹಾಯವಾಗಲು ಕೋಲ್ಗೇಟ್‌–ಪಾಮೋಲೀವ್‌ (ಇಂಡಿಯಾ) ಲಿಮಿಟೆಡ್‌ ಕಂಪನಿಯು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೊತೆಗೆ ಪದವಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ.

l ಅರ್ಹತೆ: ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳನ್ನು ಪಡೆದಿರಬೇಕು. 12ನೇ ತರಗತಿಯಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು. 3 ವರ್ಷದ ಪದವಿ, 4 ವರ್ಷದ ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಓದಿಗೆ ವಿದ್ಯಾರ್ಥಿ ವೇತನ ಸಹಾಯವಾಗಲಿದೆ. ಕುಂಟುಂಬದ ವಾರ್ಷಿಕ ಆದಾಯವು ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.

l ಆರ್ಥಿಕ ಸಹಾಯ: ವರ್ಷಕ್ಕೆ ₹30 ಸಾವಿರ

l ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್‌, 2021

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಅರ್ಜಿಗಳು ಮಾತ್ರ

l ಹೆಚ್ಚಿನ ಮಾಹಿತಿಗೆ: www.b4s.in/praja/KISF1

ಕೋವಿಡ್‌ ಸಂಕಷ್ಟ (ಜ್ಯೋತಿ ಪ್ರಕಾಶ) ಪರಿಹಾರ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021

l ವಿವರ: ಕೋವಿಡ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

l ಅರ್ಹತೆ: 1ನೇ ತರಗತಿಯಿಂದ ಪದವಿವರೆಗೆ ಅಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿದ್ದರೆ ಅಥವಾ ಕೋವಿಡ್‌ ಕಾರಣದಿಂದ ಕೆಲಸ ಕಳೆದುಕೊಂಡಿದ್ದರೆ, ಅರ್ಜಿ ಸಲ್ಲಿಸಬಹುದು.

l ಆರ್ಥಿಕ ಸಹಾಯ: ವರ್ಷಕ್ಕೆ ₹30 ಸಾವಿರ

l ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನೆವಂಬರ್‌, 2021

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

l ಹೆಚ್ಚಿನ ಮಾಹಿತಿಗೆ: www.b4s.in/praja/CCSP1

ಕೃಪೆ:buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT