ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಎಂಬಿಎ ನಂತರ ಮುಂದೇನು?

Last Updated 27 ಮಾರ್ಚ್ 2022, 19:30 IST
ಅಕ್ಷರ ಗಾತ್ರ

1. ನಾನು ಎಚ್‌ಆರ್ ಮತ್ತು ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡುತ್ತಿದ್ದೇನೆ. ಈ ವಿಭಾಗಗಳಿಗೆ ಸಂಬಂಧಿಸಿದಂತೆ ಸರ್ಕಾರಿ ವಲಯವೂ ಸೇರಿದಂತೆ ಯಾವ ಉದ್ಯೋಗಾವಕಾಶಗಳಿವೆ?

ಸುಹಾಸ್ ಪವಾರ್, ಊರು ತಿಳಿಸಿಲ್ಲ.

ಎಂ.ಬಿ.ಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಎಂಬಿಎ ಕೋರ್ಸ್ ನಂತರ ಆಕರ್ಷಕ ವೃತ್ತಿಯ ಅವಕಾಶಗಳಿವೆ. ಐಟಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್ಶೂರೆನ್ಸ್‌, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು. ಯುಪಿಎಸ್‌ಸಿ/ಕೆಪಿಎಸ್‌ಸಿ ಪರೀಕ್ಷೆಯ ಮುಖಾಂತರ ಅನೇಕ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನೂ ಪಡೆದುಕೊಳ್ಳಬಹುದು. ಅನುಭವದ ನಂತರ ಸ್ವಂತ ಉದ್ಯಮವನ್ನೂ ಆರಂಭಿಸಬಹುದು.

2. ನನಗೀಗ 43 ವರ್ಷ. ನಾನು 1993–95 ರ ಬ್ಯಾಚ್‌ನಲ್ಲಿ ಐಟಿಐ ಮಾಡಿದ್ದೆ. ಈಗ ನಾನು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದೇನೆ. ನನಗೆ ಎಲ್‌ಎಲ್‌ಬಿ ಮಾಡುವ ಆಸೆ ಇದೆ. ಇದರ ವಯೋಮಿತಿ ಏನು? ಈ ಕೋರ್ಸ್‌ಗೆ ಯಾವ ಕಾಲೇಜು ಉತ್ತಮ ತಿಳಿಸಿ.

ಕೆ. ನಾಗರಾಜು, ಬೆಂಗಳೂರು.

ಕಾನೂನು ವೃತ್ತಿಯನ್ನು ಅನುಸರಿಸಲು ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಅಥವಾ ಪಿಯುಸಿ ನಂತರ 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಕೋರ್ಸ್ ಮಾಡಬೇಕು. ಪ್ರಮುಖವಾಗಿ, ನೀವು ಮಾಡುವ ಕೋರ್ಸ್‌ಗೆ ಬಾರ್ ಕೌನ್ಸಿಲ್‌ ಆಫ್ ಇಂಡಿಯ ಮಾನ್ಯತೆ ಇರಬೇಕು. ಸಾಮಾನ್ಯವಾಗಿ, ಸಿಎಲ್‌ಎಟಿ/ಎಲ್‌ಎಸ್‌ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿ ಇರುತ್ತದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಅನುಸಾರ ಈಗ ಎಲ್‌ಎಲ್‌ಬಿ ಕೋರ್ಸ್ ಮಾಡಲು ವಯೋಮಿತಿಯ ನಿರ್ಬಂಧವಿಲ್ಲ. ಆದರೂ, ನೀವು ಕೋರ್ಸ್ ಮಾಡಲು ಇಚ್ಛಿಸುವ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಈ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಿ. ಎಲ್‌ಎಲ್‌ಬಿ ಕೋರ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ:https://www.getmyuni.com/llb-course#llb-admission-process

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT