ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಲೈಬ್ರರಿ ಅಪ್ರೆಂಟಿಸ್‌ ನೇಮಕಾತಿಗೆ ಅರ್ಜಿ

Last Updated 17 ಜನವರಿ 2020, 6:57 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಅಪ್ರೆಂಟಿಸ್‌ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿಯಾದ ಅಭ್ಯರ್ಥಿಗಳು ಒಂದು ವರ್ಷ ಕಾರ್ಯನಿರ್ವಹಿಸಬೇಕು. ಈ ವೇಳೆ ತರಬೇತಿ ಭತ್ಯೆಯನ್ನು ನೀಡಲಾಗುವುದು.

ಲೈಬ್ರರಿ ಅಪ್ರೆಂಟಿಸ್‌ ಹುದ್ದೆಗಳಸಂಖ್ಯೆ: 25

ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್‌ ಆಫ್‌ ಲೈಬ್ರರಿ ಸೈನ್ಸ್‌ ಪದವಿ ಅಥವಾಲೈಬ್ರರಿ ಇನ್‌ ಡಿಪ್ಲೋಮಾ ಸೈನ್ಸ್‌ನಲ್ಲಿ ಉತ್ತೀಣರ್ರಾಗಿರಬೇಕು( ಇದು ದ್ವಿತೀಯ ಪಿ.ಯು.ಸಿ.ನಂತರದ ಎರಡು ವರ್ಷದ ಕೋರ್ಸ್‌)

2018–19ನೇ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ತರಬೇತಿ ಭತ್ಯೆ

1)ಮಾಸ್ಟರ್‌ ಆಫ್‌ ಲೈಬ್ರರಿ ಸೈನ್ಸ್‌ ಪದವಿ ಪಡೆದವರಿಗೆ ಮಾಸಿಕ ₹ 15,000 ತರಬೇತಿ ನೀಡಲಾಗುವುದು.

2)ಲೈಬ್ರರಿ ಇನ್‌ ಡಿಪ್ಲೋಮಾ ಸೈನ್ಸ್‌ ಪಡೆದವರಿಗೆ ಮಾಸಿಕ₹ 10,000 ತರಬೇತಿ ನೀಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ಬೆಂಗಳೂರು ವಿಶ್ವವದ್ಯಾಲಯದ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಯ ಜೊತೆ ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನ ದಿನಾಂಕ: 18–01–2020 ( ಬೆಳಗ್ಗೆ 11 ಗಂಟೆ)

ಸಂದರ್ಶನ ಸ್ಥಳ: ಬೋರ್ಡ್‌ ರೂಮ್‌ (ಕುಲಪತಿಗಳ ಕೊಠಡಿ ಪಕ್ಕ) ಆಡಳಿತ ಕಚೇರಿ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು–65

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್ಕಿಸಿ

ಲಿಂಕ್‌:https://bit.ly/38iGfeL

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT