ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC, ITI ಪಾಸು: ಹಿಂದೂಸ್ತಾನ್‌ ಕಾಪರ್‌ನಲ್ಲಿ 120 ಅಪ್ರೆಂಟಿಸ್‌ಗಳಿಗೆ ಅರ್ಜಿ

Last Updated 25 ಫೆಬ್ರುವರಿ 2020, 12:17 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂಸ್ತಾನ್‌ ಕಾಪರ್‌ ಲಿಮಿಟೆಡ್‌ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 120 ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಹಾಕಬೇಕು. ಕೇಂದ್ರ ಸರ್ಕಾರದಅಧಿಕೃತ ವೆಬ್‌ಸೈಟ್ apprenticeship.gov.inಗೆ ಲಾಗಿನ್‌ ಆಗಿ ನೋಂದಣಿ ಮಾಡಬೇಕು.

ಹುದ್ದೆಗಳ ಮಾಹಿತಿ:ಫಿಟ್ಟರ್, ವೆಲ್ಡರ್, ಪೇಂಟರ್‌, ಕಾರ್ಪೆಂಟರ್, ಎಲೆಕ್ಟ್ರಿಷಿಯನ್‌, ಎಲೆಕ್ಟ್ರಾನಿಕ್ ಮೆಕಾನಿಕ್, ವೈರ್‌ಮನ್‌, ಟರ್ನರ್‌.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಪೂರ್ಣಗೊಳಿಸಿರುವುದರ ಜತೆಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ತರಬೇತಿ ಪ್ರಮಾಣಪತ್ರ ಪಡೆದಿರಬೇಕು.

ವಯೋಮಿತಿ: ಗರಿಷ್ಠ 25 ವರ್ಷಗಳನ್ನು ಮೀರಿರಬಾರದು. (ಸರ್ಕಾರದ ನಿಯಮಗಳ ಅನ್ವಯ ಮೀಸಲಾತಿ ಸಡಿಲಿಕೆ ಇರುತ್ತದೆ).

ವಯೋಮಿತಿ ಸಡಿಲಿಕೆ:ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ನೇಮಕಾತಿ ಪ್ರಕ್ರಿಯೆ: ಲಿಖಿತ ಹಾಗೂ ದೈಹಿಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಅಂತಿಮವಾಗಿ ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ನೇಮಕಾತಿ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಮೇಲೆ ಕ್ಲಿಕ್ಕಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನ:13 ಮಾರ್ಚ್‌ 2020

ವೆಬ್‌ಸೈಟ್‌:https://www.hindustancopper.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT