ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೆಂಟ್‌ ಕ್ಯುರೇಟರ್‌ ಆಗುವುದು ಹೇಗೆ?

Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕ್ಯುರೇಟರ್‌. ಸಾಮಾನ್ಯವಾಗಿ ವಸ್ತು ಸಂಗ್ರಹಾಲಯದ ಮೇಲ್ವಿಚಾರಕರಿಗೆ ಈ ಪದ ಬಳಕೆಯಲ್ಲಿತ್ತು. ಆದರೆ ಈಗ ಕ್ಯುರೇಟರ್‌ ಎನ್ನುವುದನ್ನು ‘ಕಂಟೆಂಟ್‌ ಕ್ಯುರೇಟರ್‌’ ಎಂಬುದಕ್ಕೆ ಕೂಡ ಅನ್ವಯಿಸಲಾಗುತ್ತಿದ್ದು, ಇದು ಜನ್ರಪಿಯ ಆಫ್‌ಬೀಟ್‌ ವೃತ್ತಿಯಾಗಿ ಹೊರಹೊಮ್ಮಿದೆ.

ಇದು ಅಂದುಕೊಂಡಷ್ಟು ಸರಳವಲ್ಲ. ಒಂದಿಷ್ಟು ಶ್ರಮ, ಇನ್ನೊಂದಿಷ್ಟು ಬುದ್ಧಿವಂತಿಕೆ, ಮತ್ತೊಂದಿಷ್ಟು ವ್ಯವಹಾರ ಜ್ಞಾನ ಸೇರಿಸಿದರೆ ನೀವೊಬ್ಬ ಒಳ್ಳೆಯ ಕ್ಯುರೇಟರ್‌ ಆಗಿ ಅಭಿಮಾನಿಗಳ, ಗ್ರಾಹಕರ ಮನಸ್ಸನ್ನು ಗೆಲ್ಲಬಹುದು.

ನಿಮಗೆ ಕಂಟೆಂಟ್‌ ಕ್ಯುರೇಟರ್‌ ಅಥವಾ ವಿಷಯ ಸಂಗ್ರಾಹಕರಾಗಲು ಆಸಕ್ತಿ ಇದೆಯೇ? ಹಾಗಾದರೆ ನಿಮಗೆ ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತ ಹೋಗಿ. ಯಾವುದೇ ವಿಷಯ ತೆಗೆದುಕೊಳ್ಳಿ. ಉದಾಹರಣೆಗೆ ಫ್ಯಾಷನ್‌ ಮತ್ತು ಬ್ಯೂಟಿ, ಸಂಗೀತ, ಭಾರತೀಯ ಇತಿಹಾಸ... ಹೀಗೆ ತರಾವರಿ ವಿಷಯಗಳ ಆಯ್ಕೆ ನಿಮ್ಮೆ ಮುಂದಿದೆ. ಈ ಬಗ್ಗೆ ಆ್ಯಪ್‌ ಕೂಡ ಲಭ್ಯ. ಬೇಕಾದಷ್ಟು ವೆಬ್‌ಸೈಟ್‌ಗಳು ಸಿಗುತ್ತವೆ. ಅವುಗಳ ಬಗ್ಗೆ ಅಭಿಪ್ರಾಯ ಓದಿದ ನಂತರ ಮೂಲವಾಗಿ ಬಳಸಬಹುದು. ಬೇರೆ ಬೇರೆ ಮೂಲಗಳಿಂದ ಈ ಮಾಹಿತಿ ಸಂಗ್ರಹಿಸಿ ನಿಮ್ಮ ಅಭಿಮಾನಿಗಳು, ಗ್ರಾಹಕರ ಜೊತೆ ಶೇರ್‌ ಮಾಡಿ. ಇದೇ ಮುಂದೆ ನಿಮ್ಮನ್ನು ಅಮೆಝಾನ್‌, ಗೂಗಲ್‌ನಂತಹ ದೊಡ್ಡ ಕಂಪನಿಗಳಲ್ಲಿ ಉದ್ಯೋಗಕ್ಕೆ ದಾರಿ ತೋರಬಹುದು. ಅದಿಲ್ಲದಿದ್ದರೆ ಬ್ಲಾಗ್‌ ಮಾಡಿಕೊಂಡು ಜಾಹೀರಾತುಗಳನ್ನು ಸಂಪಾದಿಸಿ ಲಾಭ ಪಡೆಯಬಹುದು.

ವೆಬ್‌ಸೈಟ್‌ನಲ್ಲಿ, ಬ್ಲಾಗ್‌ನಲ್ಲಿ, ಫೇಸ್‌ಬುಕ್‌ನಲ್ಲಿ, ಗ್ರಂಥಾಲಯಗಳಲ್ಲಿ ಅಡಗಿ ಕುಳಿತಿರುವ ಮಾಹಿತಿಗಳನ್ನೆಲ್ಲ ಕೆದಕಿ, ಗುಡ್ಡೆ ಹಾಕಿ, ಅದನ್ನೆಲ್ಲ ವ್ಯವಸ್ಥಿತ ರೀತಿಯಲ್ಲಿ ವರ್ಗೀಕರಿಸಿದ ಗ್ರಾಹಕರಿಗೆ ಉಣಬಡಿಸುವುದು. ಆದರೆ ಹಲವರಿಗೆ ಸಾಕಷ್ಟು ಗೊಂದಲಗಳಿವೆ, ಮಾಹಿತಿಯನ್ನು ಸೃಷ್ಟಿಸುವುದು ಮತ್ತು ಮಾಹಿತಿಯನ್ನು ಸಂಗ್ರಹಿಸುವುದರ ಮಧ್ಯೆ ವ್ಯತ್ಯಾಸವೇನು ಎಂದು.

ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಮಾಹಿತಿ ಭಾರ ಕಡಿಮೆ ಮಾಡಿ

ಒಬ್ಬ ಓದುಗನನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಮಾಹಿತಿಯೇನೋ ಸಿಗಬಹುದು. ಆದರೆ ಮಾಹಿತಿಯ ಮಹಾಪೂರದಲ್ಲಿ ತನಗೆ ಬೇಕಾಗಿರುವುದನ್ನು ಹೆಕ್ಕಿಕೊಳ್ಳುವುದು ಸಾಧ್ಯವಾಗದ ಮಾತು. ಆಗ ಕಂಟೆಂಟ್‌ ಅಥವಾ ಮಾಹಿತಿ ಕ್ಯುರೇಟರ್‌ ನೆರವಿಗೆ ಧಾವಿಸಬಹುದು. ಈ ಮಾಹಿತಿಯ ರಾಶಿಯಲ್ಲಿ ಯಾವುದು ಮಹತ್ವದ್ದು, ಯಾವುದು ಉಪಯುಕ್ತ ಎಂದು ಗುರುತಿಸಿ ಶೀಘ್ರವಾಗಿ ಗ್ರಾಹಕನಿಗೆ ತಲುಪಿಸುವುದು ಕ್ಯುರೇಟರ್‌ ಕೆಲಸ.

ವ್ಯವಸ್ಥಿತ ರೀತಿ

ಮಾಹಿತಿ ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ಅಂದರೆ ಬ್ಲಾಗ್‌ ರೂಪದಲ್ಲಿ ಕೊಡಬಹುದು. ಅಂದರೆ ವಿಶೇಷವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಉದಾಹರಣೆಗೆ ಭಾರತೀಯ ಅಡುಗೆ, ಆಭರಣ ವಿನ್ಯಾಸ ಅಥವಾ ವಿದೇಶಗಳಲ್ಲಿ ಉತ್ತಮ ಕಾಲೇಜುಗಳು.. ಹೀಗೆ ಪಟ್ಟಿ ಮಾಡಿ ಎಲ್ಲಾ ಮಾಹಿತಿಯನ್ನು ಒಂದೇ ಕಡೆ ವ್ಯವಸ್ಥಿತವಾಗಿ ನೀಡಬೇಕು.

ಒಬ್ಬರೇ ನೀಡುವುದಕ್ಕಿಂತ ಬೇರೆ ಬೇರೆ ಜನರು ಮಾಹಿತಿ ನೀಡಿದರೆ ಅನುಕೂಲ. ಅಂದರೆ ಅವರ ದೃಷ್ಟಿಕೋನ ಬೇರೆಯದೇ ಇರಬಹುದು. ಹೀಗಾಗಿ ಒಂದು ತಂಡದ ಮೂಲಕ ಕಾರ್ಯನಿರ್ವಹಿಸಿದರೆ ಮಾಹಿತಿಗೆ ಒಂದು ಸಮಗ್ರ ಸ್ವರೂಪ ನೀಡಬಹುದು.

ಮಾಹಿತಿ ಕ್ಯುರೇಟರ್‌ ಆಗಬೇಕೆಂದರೆ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.

ಈಗಾಗಲೇ ಇರುವ ವಿಷಯದ ಮೇಲೆ ಮಾಹಿತಿ ಸಂಗ್ರಹಿಸಿ ಮೌಲ್ಯ ವರ್ಧನೆ ಮಾಡುತ್ತ ಹೋಗಿ.

ಇದನ್ನು ಒಬ್ಬ ಓದುಗ ಅಥವಾ ಗ್ರಾಹಕ ಹೇಗೆ ತೆಗೆದುಕೊಳ್ಳುತ್ತಾನೆ, ಮಾಹಿತಿ ನಂಬುವಂತಹದ್ದೇ ಎಂಬುದರ ಮೇಲೆ ನಿಗಾ ಇಡಿ.

ಮುಖ್ಯವಾದ ಅಂಶಗಳನ್ನು ಮಾತ್ರ ಸೇರಿಸಿ.

ಗ್ರಾಹಕರು ಮಾಹಿತಿ ಸೃಷ್ಟಿ ಹಾಗೂ ಮಾಹಿತಿ ಸಂಗ್ರಹ ಎರಡನ್ನೂ ಕೆಲವು ಬಾರಿ ಬಯಸಬಹುದು. ಆಗ ನೀವು ಯಾವುದರ ಮೇಲೆ ಮಾಹಿತಿ, ಎಷ್ಟು ಪ್ರಮಾಣದಲ್ಲಿ ಬೇಕು, ನಿಮ್ಮ ತಂಡದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದರ ಮೇಲೆ ಈ ಅನುಪಾತವನ್ನು ಸರಿದೂಗಿಸಬೇಕು. ನಿಮಗೆ ಪ್ರೇರಣೆ ಬೇಕಾದರೆ ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟರ್‌, ಗೂಗಲ್‌, ಸೌಂಡ್‌ಕ್ಲೌಡ್‌ ಮೊದಲಾದವುಗಳನ್ನು ತಡಕಾಡಿ.

ಮೂಲ ಲೇಖಕ ಅಥವಾ ಪ್ರಕಾಶಕರನ್ನು ಹೆಸರಿಸಿ. ನಿಮ್ಮದೇ ಮೂಲ ಸೃಷ್ಟಿ ಎಂದು ತೋರಿಸಲು ಹೋಗಬೇಡಿ. ಕೆಲವು ಬ್ಲಾಗ್‌ಗಳನ್ನು ಹೆಸರಿಸಬಹುದು. ಆದರೆ ಅವು ನಂಬಲರ್ಹವಾದ ಮಾಹಿತಿ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.

ಮಾಹಿತಿ ಸಂಗ್ರಹಿಸಿದ ನಂತರ ಅದನ್ನು ಪ್ರಚಾರ ಮಾಡುವುದು ಕೂಡ ಅಷ್ಟೇ ಮುಖ್ಯ. ಗ್ರಾಹಕರು ಅದನ್ನು ಗಮನಿಸುವಂತಾಗಲು ಅವುಗಳನ್ನು ಎಲ್ಲಿ ಪೋಸ್ಟ್‌ ಮಾಡಬೇಕು ಎಂಬುದರ ಬಗ್ಗೆ ಗಮನ ಕೊಡಿ.

ಮಾಹಿತಿಗೆ ನಿಮ್ಮದೇ ಆದ ಅಭಿಪ್ರಾಯವನ್ನೂ ಸೇರಿಸಬಹುದು. ಕೇವಲ ಬ್ಲಾಗ್‌ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಪೋಸ್ಟ್‌ ಮಾಡಿದರೆ ಸಾಲದು. ನಿಮ್ಮ ದೃಷ್ಟಿಕೋನದ ಬಗ್ಗೆಯೂ ಗ್ರಾಹಕರು ಅರಿಯುವಂತಾಬೇಕು.

ಮಾಹಿತಿಗೆ ಒಂದಿಷ್ಟು ಅಂಕಿ– ಅಂಶ ಸೇರಿಸಿ. ಇದರಿಂದ ನಿಮ್ಮ ವರದಿ ಹೆಚ್ಚು ವಸ್ತುನಿಷ್ಠವಾಗುತ್ತದೆ.

ಮಾಹಿತಿ ಪ್ರದರ್ಶಿಸುವಾಗ ಚೆನ್ನಾಗಿ ಕಾಣಲು ಇನ್ಫೋಗ್ರಾಫಿಕ್ಸ್‌ ಬಳಸಿ.

ಮಾಹಿತಿಗೆ ಉದ್ಯಮದಲ್ಲಿ ಅಥವಾ ಸೆಲೆಬ್ರಿಟಿ ವಲಯದಲ್ಲಿರುವ ಖ್ಯಾತನಾಮರ ಹೇಳಿಕೆ ಸೇರಿಸಬಹುದು. ಆಗಾಗ ಉದ್ಯಮಿಗಳ ಸಮಾವೇಶ, ಕಂಪನಿಗಳಲ್ಲಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಇವುಗಳ ವರದಿ ಪತ್ರಿಕೆ, ಟಿ.ವಿ.ಗಳಲ್ಲಿ ಬರುತ್ತವೆ. ಅದರಲ್ಲಿರುವ ಹೇಳಿಕೆಗಳನ್ನು ಕೂಡ ಸೇರಿಸಬಹುದು.

ಇನ್‌ಸ್ಟಾಗ್ರಾಂ, ಪಿಂಟ್‌ರೆಸ್ಟ್‌,ಟ್ವಿಟರ್‌, ಲಿಂಕ್ಡ್‌ಇನ್‌ ನಿಮ್ಮ ಕೌಶಲ ತೋರಿಸಲು ಒಳ್ಳೆಯ ವೇದಿಕೆಗಳು. ಅಲ್ಲಿ ನಿಮ್ಮ ಚಾತುರ್ಯ ತೋರಿಸಿ.

ಫ್ಲಿಪ್‌ಬೋರ್ಡ್‌ನಲ್ಲಿ ನಿಮಗೆ ಆಸಕ್ತಿಯಿರುವ ವಿಷಯಗಳು ಲಭ್ಯ.

ಪ್ರಯೋಜನ

ಟ್ವಿಟರ್‌, ಲಿಂಕ್ಡ್‌ಇನ್‌, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚ್ಯಾಟ್‌, ಪಿಂಟರೆಸ್ಟ್‌.. ಎಲ್ಲಾ ಕಡೆ ಮಾಹಿತಿ ಕ್ಯುರೇಟ್‌ ಮಾಡಿ ಶೇರ್‌ ಮಾಡಿದರೆ ಗುರುತಿಸಿಕೊಳ್ಳಬಹುದು.

ಬೇರೆ ಬೇರೆ ಸ್ತರದ ವ್ಯಕ್ತಿಗಳ ಜೊತೆ ಸಂಪರ್ಕ ಬೆಳೆಸಿಕೊಳ್ಳಬಹುದು. ಆ ಮೂಲಕ ಗ್ರಾಹಕರನ್ನು ಸೆಳೆಯಬಹುದು.

ನೆರವು

ಪೊಕೆಟ್‌: ಯಾವುದೇ ಲೇಖನ, ವಿಡಿಯೊಗಳನ್ನು ಇಲ್ಲಿ ಕಾಪಿಡಬಹುದು.

ನ್ಯೂಸ್‌ಲೆಟರ್ಸ್‌: ಯಾವುದೆ ನ್ಯೂಸ್‌ಲೆಟರ್ಸ್‌, ಬ್ಲಾಗ್‌ಪೋಸ್ಟ್‌ಗೆ ಚಂದಾದಾರರಾಗಿ. ಅವುಗಳು ನಿಮ್ಮ ಮೇಲ್‌ಗೆ ಬಂದು ಬೀಳುತ್ತವೆ. ವಾರಕ್ಕೊಮ್ಮೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT