ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಭತ್ಯೆ ₹ 15,200: SSLC, ITI ಪಾಸಾದವರಿಗೆ ರೈಲ್ವೆಯಲ್ಲಿ 432 ಹುದ್ದೆಗಳು

Last Updated 10 ಆಗಸ್ಟ್ 2020, 10:01 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಇಲಾಖೆಯ ಸೌಥ್‌ ಈಸ್ಟ್‌ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 432 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸೌಥ್‌ ಈಸ್ಟ್‌ ಸೆಂಟ್ರಲ್ ರೈಲ್ವೆ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಇದು ನೇರ ನೇಮಕಾತಿಯಾಗಿರುತ್ತದೆ.

ಹುದ್ದೆಗಳವಿವರ: ಫಿಟ್ಟರ್, ಟರ್ನರ್‌, ಎಲೆಕ್ಟ್ರಿಷಿಯನ್, ಮೆಕಾನಿಸ್ಟ್‌, ಪ್ಲಂಬರ್‌, ಪೇಂಟರ್‌, ಕೊಪರ್‌, ಸ್ಟೆನೋ ಹುದ್ದೆಗಳ ನೇಮಕಾತಿ ನಡೆಯಲಿದೆ

ಒಟ್ಟು ಹುದ್ದೆಗಳ ಸಂಖ್ಯೆ: 432

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿಹಾಗೂ ಐಟಿಐ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ತರಬೇತಿ ಭತ್ಯೆ: ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. ಮಾಸಿಕ ₹8,000 ರಿಂದ ₹15,200 ಭತ್ಯೆ ನೀಡಲಾಗುವುದು.

ವಯೋಮಿತಿ ಸಡಿಲಿಕೆ: 31 ಆಗಸ್ಟ್‌ 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ https://secr.indianrailways.gov.in ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 30 ಆಗಸ್ಟ್‌, 2020

ಅಧಿಸೂಚನೆ ಲಿಂಕ್‌: https://img.freejobalert.com/uploads/2020/08/Notification-South-East-Central-Railway-Trade-Apprentice-Posts.pdf

ವೆಬ್‌ಸೈಟ್‌: https://apprenticeshipindia.org/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT