ಶನಿವಾರ, ಏಪ್ರಿಲ್ 4, 2020
19 °C

ಶಿಕ್ಷಕ ಪ್ರಶಸ್ತಿ: ಪಟ್ಟಿಯಲ್ಲಿ ಭಾರತದ ಮೂವರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಯುನೆಸ್ಕೊ ಸಹಯೋಗದಲ್ಲಿ ಸ್ಥಳೀಯ ವಾರ್ಕೆ ಫೌಂಡೇಷನ್‌ ನೀಡಲಿರುವ ಸುಮಾರು ₹ 7.5 ಕೋಟಿ ಮೌಲ್ಯದ ‘ಜಾಗತಿಕ ಶಿಕ್ಷಕ 2020’ ಪ್ರಶಸ್ತಿಯ ಅಂತಿಮ 50 ಜನರ ಪಟ್ಟಿಯಲ್ಲಿ ಭಾರತದ ಮೂವರು ಶಿಕ್ಷಕರು ಸ್ಥಾನಪಡೆದಿದ್ದಾರೆ.

ರಾಜಸ್ಥಾನದ ಶಿಕ್ಷಾನಿಕೇತನ ಬೇರ್‌ಫೂಟ್‌ ಕಾಲೇಜಿನ ಶುವಜಿತ್ ಪಾಯ್ನೆ, ಮಹಾರಾಷ್ಟ್ರ ಸೊಲ್ಹಾಪುರದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯ ರಂಜಿತ್‌ ಸಿನ್ಹಾ ದಿಸಾಲೆ ಮತ್ತು ದೆಹಲಿಯ ಎಸ್‌ಆರ್‌ಡಿಎವಿ ಪಬ್ಲಿಕ್‌ ಶಾಲೆಯ ವಿನಿತಾ ಗರ್ಗ್‌ ಸ್ಥಾನ ಪಡೆದಿರುವ ಮೂವರು ಶಿಕ್ಷಕರು.

140 ದೇಶಗಳಿಂದ 12,000 ಪ್ರವೇಶಗಳು ಬಂದಿದ್ದು, ಈ ಪೈಕಿ ಅಂತಿಮ 50 ಜನರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ 10 ಜನರನ್ನು ಆಯ್ಕೆ ಸಮಿತಿ ಪ್ರಶಸ್ತಿಗೆ ಅಂತಿಮಗೊಳಿಸಲಿದೆ. ಜೂನ್‌ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು