ಗುರುವಾರ , ಏಪ್ರಿಲ್ 2, 2020
19 °C

ಮಕ್ಕಳ ಕ್ಲಬ್‌ ಆಯೋಜಕರು

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಇಂದಿನ ಒತ್ತಡದ ಶೈಲಿಯಲ್ಲಿ ತಂದೆ–ತಾಯಿಗಳಿಗೆ ಮಕ್ಕಳನ್ನು ನೋಡಿಕೊಳ್ಳುವುದು ಸವಾಲು, ಅದರಲ್ಲೂ ಮಕ್ಕಳ ರಜಾದಿನಗಳಲ್ಲಿ ಅದರೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಕಷ್ಟವೇ. ಅಂತಹ ತಂದೆ–ತಾಯಿಗಳಿಗೆ ನೆರವಾಗಲೆಂದೇ ಸೃಷ್ಟಿಯಾದ ಉದ್ಯೋಗ ‘ಕಿಡ್ಸ್ ಕ್ಲಬ್ ಹೋಸ್ಟರ್’. ಇವರು ಮಕ್ಕಳ ರಜಾದಿನಗಳು, ಬರ್ತ್‌ಡೇ ಪಾರ್ಟಿಗಳು ಮುಂತಾದ ಕಾರ್ಯಕ್ರಮಗಳ ಆಯೋಜನೆಗಳಲ್ಲಿ ನೆರವಾಗುವ ಮೂಲಕ ತಂದೆ–ತಾಯಿ ಹಾಗೂ ಮಕ್ಕಳಿಗೂ ಸಂತಸ ನೀಡುತ್ತಾರೆ. ಇವರನ್ನು ಕಿಂಟರ್‌ಗಾರ್ಟನ್‌, ಪ್ಲೇಹೋಮ್‌ಗಳಲ್ಲೂ ನಿಯೋಜನೆ ಮಾಡಿಕೊಳ್ಳುತ್ತಾರೆ.  

ಯಾರು ಈ ಕಿಡ್ಸ್ ಕ್ಲಬ್ ಹೋಸ್ಟರ್‌?

ಕಿಡ್ಸ್ ಕ್ಲಬ್ ಆಯೋಜಕರು ಎಂದರೆ ಕೇವಲ ಮಕ್ಕಳನ್ನು ಆಟವಾಡಿಸಿ ಸಂತೋಷ ಪಡಿಸುವವರಲ್ಲ. ಈ ವೃತ್ತಿಯಲ್ಲಿ ಮುಂದುವರಿಯಬೇಕಾದರೆ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡುವ ಹಾಗೂ ಕಿಂಡರ್‌ಗಾರ್ಟನ್ ಬೋಧನೆಯ ಅನುಭವ‌ವನ್ನು ಹೊಂದಿರಬೇಕು. ಮಕ್ಕಳೊಂದಿಗೆ ಸಮಯ ಕಳೆಯಬೇಕು, ಅವರೊಂದಿಗೆ ಪ್ರವಾಸ, ಪಿಕ್‌ನಿಕ್ ಮಾಡಬೇಕು. ಅವೆಲ್ಲದರೊಂದಿಗೆ ಮಕ್ಕಳು ಆಯೋಜಕರೊಂದಿಗೆ ಸುರಕ್ಷತೆಯಿಂದ ಹಾಗೂ ಮೋಜಿನಿಂದ ಸಮಯ ಕಳೆಯುತ್ತಾರೆಂಬ ಭರವಸೆಯನ್ನು ನೀಡುವಂತರಾಗಿರಬೇಕು.

ಮಕ್ಕಳು ಕಲ್ಪನೆ ಮಾಡದಂತಹ ರೀತಿಯಲ್ಲಿ ಕೆಲವೊಂದು ಕಿಂಡರ್‌ಗಾರ್ಟನ್‌ಗಳಲ್ಲಿ ಬೇಸಿಗೆ ರಜೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರು ಕಿಡ್ಸ್ ಕ್ಲಬ್ ಹೋಸ್ಟರ್‌ಗಳು.

ಇವರು ಮಕ್ಕಳಿಗೆ ಕೇವಲ ಮೋಜು, ಮಸ್ತಿ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೇ ಅವರ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಜೀವನಕ್ಕೆ ಸ್ಫೂರ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಕೆಲಸ–ಕಾರ್ಯಗಳು

ಯಾವುದೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಡೇಕೇರ್, ಕಿಂಟರ್‌ಗಾರ್ಟನ್ ಅಥವಾ ಪ್ಲೇಹೋಮ್‌ಗಳೊಂದಿಗೆ ಕೆಲಸ ಮಾಡಲು ಸಿದ್ಧರಿರಬೇಕು. ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಮೋಜು, ಮಸ್ತಿಯೊಂದಿಗೆ ಸಮಯವನ್ನು ಕಳೆಯುವಂತೆ ಮಾಡಬೇಕು.

ಎಲ್ಲಾ ವಯಸ್ಸಿನ ಮಕ್ಕಳಿಗೂ ಹೊಂದುವಂತಹ ಚಟುವಟಿಕೆಗಳನ್ನು ಮಾಡಿಸುವಂತಿರಬೇಕು. ನಿಮ್ಮಲಿರುವ ಕ್ರಿಯಾಶೀಲತೆ ಹಾಗೂ ಹೊಂದಾಣಿಕೆಯ ಮೂಲಕ ಮಕ್ಕಳಿಗೆ ಮನರಂಜನೆ ನೀಡಬೇಕು.

ಮಕ್ಕಳನ್ನು ಸಂಭಾಳಿಸುವ ಕೌಶಲ ಬೆಳೆಸಿಕೊಂಡಿರಬೇಕು. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವ, ಕಾಳಜಿ ತೋರುವ ಗುಣ ಈ ವೃತ್ತಿಗೆ ಬಹಳ ಮುಖ್ಯ.

ಬೆಳಿಗ್ಗೆ ಹಾಗೂ ಸಂಜೆ ವೇಳೆ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜೊತೆಗೆ ಬಿಡುವಿನ ವೇಳೆಯಲ್ಲಿ ಪೇಂಟಿಂಗ್, ಡ್ರಾಯಿಂಗ್, ಅಬ್ಯಾಕಸ್‌ನಂತಹ ಓದಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ನಡೆಸಬೇಕು. ಸಂಜೆ ವೇಳೆ ಪರೇಡ್ ನಡೆಸುವುದು, ಪಾರ್ಟಿಡಾನ್ಸ್‌ಗಳನ್ನು ಆಯೋಜಿಸುವ ಮೂಲಕ ಮಕ್ಕಳು ಇಡೀ ದಿನ ಸಂತಸದಿಂದ ಕಳೆಯುವಂತೆ ಮಾಡಬೇಕು.

ನಿಮ್ಮಲ್ಲಿರುವ ಕೌಶಲ ಹಾಗೂ ಅನುಭವದ ಮೂಲಕ ಕಿಡ್ಸ್ ಕ್ಲಬ್ ಅನ್ನು ಯಶಸ್ವಿಯಾಗಿ ನಡೆಸಲು ತಿಳಿದಿರಬೇಕು. ಅದರೊಂದಿಗೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ಕುರಿತಾದ ಮಾರ್ಗದರ್ಶನ ಸೂತ್ರಗಳ ಬಗ್ಗೆಯೂ ಅರಿವು ಹೊಂದಿರಬೇಕು.

ಇವೆಲ್ಲದರೊಂದಿಗೆ ತಾಳ್ಮೆ ಹಾಗೂ ಸಹನೆಯಿಂದ ಮಕ್ಕಳೊಂದಿಗೆ ವರ್ತಿಸುವುದು, ಅವರು ಕೇಳಿದ್ದನ್ನು ನೆರವೇರಿಸುವ ಮನೋಭಾವ ನಿಮ್ಮಲ್ಲಿರಬೇಕು.

ವೇತನ

ಈ ವೃತ್ತಿಗೆ ಇಂತಿಷ್ಟೇ ವೇತನ ಎಂದು ನಿಗದಿಪಡಿಸದಿದ್ದರೂ ನೀವು ಸೇರುವ ಸಂಸ್ಥೆಯ ಮೇಲೆ ನಿಮ್ಮ ವೇತನ ನಿರ್ಧರಿತವಾಗುತ್ತದೆ. ಅಲ್ಲದೇ ಖಾಸಗಿಯಾಗಿ ನೀವು ಕಿಡ್ಸ್ ಕ್ಲಬ್ ಆಯೋಜನೆ ಮಾಡಿದರೆ ಉತ್ತಮ ಸಂಪಾದನೆ ಮಾಡಬಹುದು.

 

ಯಶಸ್ವಿಯಾಗಿ ಕಿಡ್ಸ್ ಕ್ಲಬ್‌ಗಳನ್ನು ಆಯೋಜನೆ ಮಾಡುವುದು ಹೇಗೆ..
*ಸಣ್ಣ,ದೊಡ್ಟ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಿಡ್ಸ್ ಕ್ಲಬ್ ಗಳಲ್ಲಿ ಕೆಲಸ ಮಾಡಿದ ಅನುಭವಗಳನ್ನು ನೀವು ಹೊಂದಿರಬೇಕು. ಆಗ ಎಲ್ಲಾ ಭಾಷೆ, ಜೀವನಶೈಲಿ, ರೀತಿ-ನೀತಿ ಮಕ್ಕಳನ್ನು ನೋಡಿದ ಅನುಭವ ನಿಮಗಿರುತ್ತದೆ.
* ಸಣ್ಣ ಮಕ್ಕಳ ಮನಸ್ಸಿಗೆ ಖುಷಿ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಎಲ್ಲಾ ವಯಸ್ಸಿನ ಮಕ್ಕಳಿಗೂ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನು ನಡೆಸುವ ಕಲೆ ನಿಮ್ಮಲಿರಬೇಕು.
*ನಿಮ್ಮ ಅನುಭವ ಹಾಗೂ ಕೌಶಲದ ಮೂಲಕ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಎಲ್ಲಾ ರೀತಿಯ ಸುರಕ್ಷತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಅರಿಯುವ ಸಾಮರ್ಥ್ಯ ನಿಮ್ಮದಾಗಬೇಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು