ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತದ ಆ್ಯಪ್‌ ಫೋಟೊಮ್ಯಾಥ್‌

Last Updated 15 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹೆಸರೇ ಹೇಳುವಂತೆ ಇದು ಗಣಿತಕ್ಕಾಗಿರುವ ಆ್ಯಪ್‌. ಕಲಿಕೆಗೆ ಸಕಲ ರೀತಿಯಲ್ಲೂ ನೆರವಾಗುವ ಈ ಆ್ಯಪ್‌ ವಿಶೇಷವಾಗಿ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತದೆ. ಇದು ನೀವು ಬರೆದಿರುವಂತಹ ಸಮೀಕರಣಗಳನ್ನು ಕ್ಯಾಮೆರಾ ಹಾಗೂ ಒಸಿಆರ್‌ ತಂತ್ರ ಜ್ಞಾನವನ್ನು ಬಳಸಿ ಓದಿ, ಉತ್ತರವನ್ನು ನೀಡುತ್ತದೆ. ಜೊತೆಗೆ ಸಮಸ್ಯೆಯನ್ನು ಹಂತ ಹಂತವಾಗಿ ಬಿಡಿಸುವ ಸಂಪೂರ್ಣ
ಪ್ರಕ್ರಿಯೆಯನ್ನೂ ತೋರಿಸುತ್ತದೆ. ಹೀಗಾಗಿ ಗಣಿತದ ಸಮಸ್ಯೆಗಳನ್ನು ಬಿಡಿಸುವ ವಿಧಾನವನ್ನು ನೀವು ಕಲಿಯಬಹುದು.

ಗಣಿತವೆಂದರೆ ತಲೆನೋವು ಎಂದು ಕಷ್ಟಪಡುವವರು ಈ ಆ್ಯಪ್‌ ಬಳಸಿ ಸುಲಭವಾಗಿ ಕಲಿಯಬಹುದು. ಇದರ ಉಚಿತ ಆವೃತ್ತಿಯಲ್ಲಿ ಬೇಸಿಕ್‌ ತಂತ್ರಗಳು ಮಾತ್ರ ಲಭ್ಯ. ಸಮೀಕರಣವನ್ನು ಸಂಪೂರ್ಣವಾಗಿ, ಹಂತ ಹಂತವಾಗಿ ಬಿಡಿಸುವುದು, ವಿವರಗಳು, ಹೆಚ್ಚುವರಿ ಸೂತ್ರಗಳು ಬೇಕಾದರೆ ಶುಲ್ಕ ನೀಡಬೇಕಾಗುತ್ತದೆ. ಇದೆ ರೀತಿ ಸೊಕ್ರಾಟಿಕ್‌ ಎಂಬ ಗಣಿತದ ಇನ್ನೊಂದು ಆ್ಯಪ್‌ ಸ್ವಲ್ಪ ಬೇರೆ ರೀತಿಯಲ್ಲಿ ಗಣಿತದ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT