ಭಾನುವಾರ, ಸೆಪ್ಟೆಂಬರ್ 26, 2021
21 °C

ಬಾಹ್ಯಾಕಾಶ ಅನುಭವ ಪಡೆದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಹಂಟ್ಸ್‌ ವಿಲ್ಲೆಯ ಯುಎಸ್ ಬಾಹ್ಯಾಕಾಶ ಮತ್ತು ರಾಕೆಟ್‌ ಕೇಂದ್ರದ (ಯುಎಸ್‌ಎಸ್‌ಆರ್‌ಸಿ) ಹನಿವೆಲ್‌ ಲೀಡರ್‌ಶಿಪ್‌ ಚಾಲೆಂಜ್‌ ಅಕಾಡೆಮಿಯಲ್ಲಿ (ಎಚ್ಎಲ್‌ಸಿಎ) ಎರಡು ವಾರ ನಡೆದ ಶಿಬಿರದಲ್ಲಿ ಬೆಂಗಳೂರಿನ ಏಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಶಿಷ್ಟ ನಾಯಕತ್ವ ಶಿಬಿರದಲ್ಲಿ 41 ರಾಷ್ಟ್ರಗಳ 16–18 ವರ್ಷದ 291 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಹ್ಯಾಕಾಶ ನೌಕೆ ನಿರ್ವಹಣೆ, ಚಂದ್ರನಲ್ಲಿ ಗಗನಯಾನಿಗಳ ನಡಿಗೆಯಂತಹ ತರಬೇತಿಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.

ಬೆಂಗಳೂರಿನ ಏಳು ವಿದ್ಯಾರ್ಥಿಗಳ ಜತೆ ಪುಣೆಯ ಎಂಟು, ದೆಹಲಿ ಎನ್‌ಸಿಆರ್‌ ಮತ್ತು ಹೈದರಾಬಾದ್‌ನಿಂದ ತಲಾ ಒಬ್ಬ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಿದ್ದರು.

‘ಜೀವನದ ಪ್ರತಿ ಹೆಜ್ಜೆಗಳನ್ನು ಹೇಗೆ ಸ್ವತಂತ್ರವಾಗಿ ನಿರ್ವಹಿಸಬೇಕು ಎನ್ನುವುದನ್ನು ಈ ಶಿಬಿರ ನನಗೆ ಕಲಿಸಿದೆ’ ಎಂದು ಬೆಂಗಳೂರಿನ ಶ್ರೀಕರ ದೇಸು ಮತ್ತು  ಮಲ್ಟಿ ಎಕ್ಸಿಸ್‌ ಟ್ರೇನರ್‌ನಲ್ಲಿ ಭಾಗವಹಿಸಿದ್ದ ಆಕಾಂಕ್ಷಾ ಪ್ರಭು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜಗತ್ತಿನ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು ಅತ್ಯಂತ ರೋಮಾಂಚನಕಾರಿಯಾಗಿತ್ತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಾಸಾ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡಿಗ ವಿದ್ಯಾರ್ಥಿ ವಿಜೇತ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯೋಜಿಸಿದ್ದ 2018–19ನೇ ಸಾಲಿನ  ‘ಸೈಂಟಿಸ್ಟ್‌ ಫಾರ್‌ ಎ ಡೇ’ ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡಿಗ ವಿದ್ಯಾರ್ಥಿ ರಮೇಶ್‌ ರವೀಂದ್ರ ಪತ್ತಾರ್‌ ವಿಜೇತನಾಗಿ ಹೊರ ಹೊಮ್ಮಿದ್ದಾನೆ. 

ಸದ್ಯ ಅಮೆರಿಕದ ಶಾಲೆಯಲ್ಲಿ ಕಲಿಯುತ್ತಿರುವ ರಮೇಶ್‌ ಈ ಮೊದಲು ಬೆಂಗಳೂರಿನ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ (ನಾರ್ತ್‌) ನಲ್ಲಿ ಕಲಿಯುತ್ತಿದ್ದ. ಕೆಲಸದ ನಿಮಿತ್ತ ಆತನ ತಂದೆ ರವೀಂದ್ರ ಪತ್ತಾರ್‌ ಕೆಲವು ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದಾರೆ.

ರಮೇಶ್‌ ಬರೆದ ಪ್ರಬಂಧ ಅದ್ಭುತವಾಗಿದ್ದು, ವಿಜೇತನಾಗಿ ಹೊರಹೊಮ್ಮಿದ್ದಾನೆ ಎಂದು ಕ್ಯಾಲಿಫೋರ್ನಿಯಾದದಲ್ಲಿರುವ ನಾಸಾ ಜೆಟ್‌ ಪ್ರೊಪುಲ್ಶನ್‌ ಲ್ಯಾಬೊರೇಟರಿಯ ರಚೇಲ್‌ ಝಿಮ್ಮರ್‌ಮನ್‌ ಬ್ರಾಚ್‌ಮನ್‌ ಅವರು ಪಾಲಕರಿಗೆ ಪತ್ರ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು