ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನದ ಕೈಪಿಡಿ

Last Updated 19 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ವರ್ಗ: ಆರ್ಥಿಕ ಮತ್ತು ಮೆರಿಟ್‌ ಆಧಾರಿತ

ವಿದ್ಯಾರ್ಥಿ ವೇತನ: ಪೊಲೀಸ್‌ ಮೆಮೋರಿಯಲ್‌ ಫಂಡ್‌ ಸ್ಕಾಲರ್‌ಶಿಪ್ 2018–19

ವಿವರ: ಕೇಂದ್ರ ಗೃಹ ಇಲಾಖೆ, ಗುಪ್ತಚರ ವಿಭಾಗದಲ್ಲಿ (ಐ.ಬಿ) ಕಾರ್ಯ ನಿರ್ವಹಿಸುವಾಗ ಹುತಾತ್ಮರಾದ ಐಬಿ ಅಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತೆ: ಪೊಲೀಸ್‌ ಇಲಾಖೆ ಮತ್ತು ಐ.ಬಿಯಲ್ಲಿ ಹುತಾತ್ಮರಾದ ನಾನ್‌ ಗೆಜೆಟೆಡ್‌ ಅಧಿಕಾರಿಗಳ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರು. ಪೊಲೀಸ್‌ ವರಿಷ್ಠಾಧಿಕಾರಿ/ ಸಹಾಯಕ ನಿರ್ದೇಶಕರು/ ಕಮ್ಯಾಂಡೆಂಟ್‌ ರ‍್ಯಾಂಕ್‌ ಮೇಲ್ಮಟ್ಟದ ಅಧಿಕಾರಿಗಳು ಶಿಫಾರಸು ಮಾಡಿದವರ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್‌ ಅಥವಾ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಕೋರ್ಸ್‌ಗಳ ಅಧ್ಯಯನಕ್ಕೆ ಹಣಕಾಸಿನ ನೆರವು ದೊರೆಯುತ್ತದೆ.

ಕೊನೆಯ ದಿನಾಂಕ: 2019ರ ಫೆಬ್ರುವರಿ 28

ಅರ್ಜಿ ಸಲ್ಲಿಕೆ ವಿಧಾನ: ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬಹುದು

ಮಾಹಿತಿಗೆ: http://www.b4s.in/praja/PMF6

***

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: ಚೆವನಿಂಗ್‌ ಗುರುಕುಲ ಫೆಲೋಶಿಪ್‌ 2019–20, ಯು.ಕೆ

ವಿವರ: ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ರಾಜನೀತಿ ಮತ್ತು ಅಂತರರಾಷ್ಟ್ರೀಯ ಸಂಬಂಧ ವಿಭಾಗ (ಡಿಪಿಐಆರ್‌) ಈ ಫೆಲೋಶಿಪ್‌ ನೀಡುತ್ತದೆ. ರಾಜನೀತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅಧ್ಯಯನ ಮಾಡ ಬಯಸುವ ಯುವ ಮತ್ತು ಅನುಭವಿ ವೃತ್ತಿಪರರಿಗೆ 12 ವಾರಗಳ ವಸತಿಯುಕ್ತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಿದೆ.

ಅರ್ಹತೆ: ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ತತ್ಸಮಾನ ಪದವಿಯೊಂದಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ, ಖಾಸಗಿ ವಲಯ, ಮಾಧ್ಯಮ ಮತ್ತು ನಾಗರಿಕ ಸಮಾಜದಲ್ಲಿ ನಾಯಕ ಪಾತ್ರವನ್ನು ನಿಭಾಯಿಸಿ, ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವವರು ಅರ್ಹರು. ಇದರ ಜೊಇತೆಗೆ ಇಂಗ್ಲಿಷ್‌ ಭಾಷಾ ಕುಶಲತೆ ಹೊಂದಿರಬೇಕು. ಈ ಕುರಿತು ಅರ್ಹ ಮೌಲ್ಯಮಾಪಕರಿಂದ ಮೌಲ್ಯಮಾಪನಕ್ಕೆ ಒಳಗಾಗಿರುವವರು ಅರ್ಜಿ ಸಲ್ಲಿಸಬಹುದು.

ನೆರವು: ವಿಮಾನ ಟಿಕೆಟ್‌ ದರ, ಅಧ್ಯಯನಕ್ಕೆ ತಗಲುವ ಖರ್ಚು, ವೀಸಾ ಸೇರಿದಂತೆ ಈ ಕಾರ್ಯಕ್ರಮದ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಲಾಗುತ್ತದೆ.

ಕೊನೆಯ ದಿನ: 2019ರ ಫೆಬ್ರುವರಿ 27

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/CGF1

***

ವರ್ಗ: ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ಪ್ರಕೃತಿ ಸಂಶೋಧನಾ ಫೆಲೋಶಿಪ್‌ 2019–20

ವಿವರಣೆ: ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ನೇರ, ಸ್ಪಷ್ಟ ಮತ್ತು ದೀರ್ಘಕಾಲಿಕ ಪರಿಣಾಮ ಬೀರಬಲ್ಲ ಯೋಜನೆಗಳನ್ನು ಕೈಗೊಳ್ಳಲು ಬಯಸುವ ಸ್ವತಂತ್ರ ಸಂಶೋಧಕರು ಮತ್ತು ಸಣ್ಣ ಎನ್‌ಜಿಒಗಳಿಗೆ ‘ಸೆಂಟರ್‌ ಫಾರ್‌ ಅಪ್ಲೈಡ್‌ ರಿಸರ್ಚ್‌ ಅಂಡ್‌ ಪೀಪಲ್ಸ್‌ ಎಂಗೇಜ್‌ಮೆಂಟ್‌’ (ಸಿಎಆರ್‌ಪಿಇ) ಈ ಫೆಲೋಶಿಪ್‌ ನೀಡುತ್ತದೆ. ಈ ಯೋಜನೆಗಳ ಸಾಮಾಜಿಕ ಪರಿಣಾಮ ಎಷ್ಟಿದೆ ಎಂಬುದನ್ನು ಆಧರಿಸಿ ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತೆ: ಪರಿಸರ ಸಂರಕ್ಷಣೆ ಕುರಿತು ಸ್ವಯಂ ಪ್ರೇರಿತರಾಗಿ ಮತ್ತು ಆಸಕ್ತಿಯಿಂದ ಕಾರ್ಯ ನಿರ್ವಹಿಸುವ ದೇಶದಲ್ಲಿನ ಸ್ವತಂತ್ರ ಸಂಶೋಧಕರು, ಸಣ್ಣ ಪ್ರಮಾಣದ ಎನ್‌ಜಿಒಗಳು ಮತ್ತು ಪರಿಸರ ಸಂರಕ್ಷಣಾ ಗುಂಪುಗಳು ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾಗುವವರಿಗೆ ಸಿಎಆರ್‌ಪಿಇ ₹ 2 ಲಕ್ಷ ಆರ್ಥಿಕ ನೆರವು ನೀಡುತ್ತದೆ.

ಕೊನೆಯ ದಿನ: 2019 ಫೆಬ್ರುವರಿ 28

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/PRF3

–ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT