ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ

Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿವೇತನ:ಯುಸಿಡಿ ಮೈಕೆಲ್ ಸ್ಮರ್ಫಿಟ್ ಗ್ರಾಜುಯೇಟ್ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿವೇತನ–2020

ವಿವರ: ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಯುಸಿಡಿ ಮೈಕೆಲ್‌ ಸ್ಮರ್ಫಿಟ್‌ ಗ್ರಾಜುಯೇಟ್‌ ಬ್ಯುಸಿನೆಸ್‌ ಸ್ಕೂಲ್‌ ತನ್ನಲ್ಲಿ ಎಂ.ಎಸ್‌ಸಿ. ಕೋರ್ಸ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಿದೆ.

ಅರ್ಹತೆ:ಸ್ಮರ್ಫಿಟ್ ಸ್ಕೂಲ್‌ನಲ್ಲಿ ಎಂ.ಎಸ್‌ಸಿ. ಕೋರ್ಸ್‌ ಪ್ರವೇಶಕ್ಕೆ ಒಪ್ಪಿಗೆ ಪತ್ರ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜಿಮ್ಯಾಟ್‌ ಪರೀಕ್ಷೆಯಲ್ಲಿ 650 ಅಥವಾ ಅದಕ್ಕೂ ಹೆಚ್ಚು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ವಿನಾಯ್ತಿ ಸಿಗಲಿದೆ.

ಕೊನೆಯ ದಿನ: 2020ರ ಮಾರ್ಚ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಮಾಹಿತಿ: www.b4s.in/praja/UMS1

***

ವಿದ್ಯಾರ್ಥಿವೇತನ: ಆರೆಂಜ್‌ ಟ್ಯುಲಿಪ್‌ ವಿದ್ಯಾರ್ಥಿವೇತನ 2020–21
ವಿವರ: ನ್ಯೂಫಿಕ್ಸ್‌ ನೆದರ್‌ಲೆಂಡ್ಸ್‌ ಎಜುಕೇಷನ್‌ ಸಪೋರ್ಟ್‌ ಕಚೇರಿ ಈ ವಿದ್ಯಾರ್ಥಿವೇತನ ಘೋಷಿಸಿದೆ. ನೆದರ್‌ಲೆಂಡ್ಸ್‌ನ ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆಯ್ಕೆಯಾಗುವವರಿಗೆ ಬೋಧನಾ ಶುಲ್ಕದಲ್ಲಿ ಶೇ 100ರಷ್ಟು ವಿನಾಯ್ತಿ ದೊರೆಯಲಿದೆ.

ಅರ್ಹತೆ: ನೆದರ್‌ಲೆಂಡ್ಸ್‌ನಲ್ಲಿಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ಅಥವಾ ಪ್ರವೇಶ ಪಡೆಯಲು ಒಪ್ಪಿಗೆ ದೊರೆತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ನೆದರ್‌ಲೆಂಡ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಆರ್ಥಿಕ ನೆರವು: ಆಯ್ಕೆಯಾಗುವವರಿಗೆ ಶೇ 100ರಷ್ಟು ಬೋಧನಾ ಶುಲ್ಕದಲ್ಲಿ ವಿನಾಯ್ತಿ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಮಾರ್ಚ್‌ 1

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: www.b4s.in/praja/OTS7

***

ವಿದ್ಯಾರ್ಥಿವೇತನ: ಎಂಜಿನಿಯರಿಂಗ್ ಸ್ಮಾರಕ ವಿದ್ಯಾರ್ಥಿವೇತನ 2020
ವಿವರ:
ಕೆನಡಾದ ಒಟ್ಟಾವ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗೆ (ಕಂಪ್ಯೂಟರ್‌ ಎಂಜಿನಿಯರಿಂಗ್‌ ಹೊರತುಪಡಿಸಿ) ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಇದು ಹೊಂದಿದೆ.

ಅರ್ಹತೆ: ಒಟ್ಟಾವ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಪದವಿ ಕೋರ್ಸ್‌ ಪ್ರವೇಶಕ್ಕೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹ 1.07 ಲಕ್ಷ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020 ಮಾರ್ಚ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: www.b4s.in/praja/FMM1

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT