ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ದಾರಿ ಯಾವುದು?

ಕೇಂಬ್ರಿಜ್, ಹಾರ್ವರ್ಡ್‌, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌
Last Updated 15 ಮೇ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕು ಎಂಬ ಹಂಬಲ ಸಾಕಷ್ಟು ವಿದ್ಯಾರ್ಥಿಗಳಿಗೆ ಇರುತ್ತದೆ. ಅದರಲ್ಲೂ ಹಾರ್ವರ್ಡ್‌, ಕೇಂಬ್ರಿಜ್‌, ಆಕ್ಸ್‌ಫರ್ಡ್‌, ಎಂಐಟಿ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಗಳಂತಹ ಸಂಸ್ಥೆಗಳು ಹಲವರ ಕನಸಾಗಿರುತ್ತದೆ.

ಅಲ್ಲದೆ, ಅಮೆರಿಕ, ಬ್ರಿಟನ್‌, ಜರ್ಮನಿ ಮತ್ತು ಯುರೋಪ್‌ಗಳಲ್ಲೂ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ
ಗಳಿವೆ. ಇಂತಹ ಸಂಸ್ಥೆಗಳಲ್ಲಿ ಪ್ರವೇಶಗಿಟ್ಟಿಸುವುದು ಅಷ್ಟು ಸುಲಭವಲ್ಲ. ಪ್ರತಿಭಾವಂತರಿಗೆ ಅವಕಾಶಗಳು ಕೈಬೀಸಿ ಕರೆಯುತ್ತವೆ.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಮನಸ್ಸಾದರೆ, ಮೊದಲು ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಬೇಕು. ನಿರ್ದಿಷ್ಟ ವಿಶ್ವವಿದ್ಯಾಲಯದ ಬಗ್ಗೆ ಖಚಿತ ಮಾಹಿತಿ ಇದ್ದರೆ ಸರಿ.

ಇಲ್ಲವಾದರೆwww.topuniversities.com/student-info ದಲ್ಲಿ QS World University Rankings® ಲಿಂಕ್ ಮೂಲಕ ವಿಶ್ವದ ಅಗ್ರಶ್ರೇಣಿಯ ವಿಶ್ವವಿದ್ಯಾಲಯಗಳ ಮಾಹಿತಿ ಸಿಗುತ್ತದೆ. ವಿದ್ಯಾರ್ಥಿಯ ಆಸಕ್ತಿಯ ಕೋರ್ಸ್‌ಗಳ ವಿಶ್ವವಿದ್ಯಾಲಯ ಗುಣಮಟ್ಟ ಮತ್ತು subject rankings ವಿವರ ಇರುತ್ತದೆ.

ವಿಶ್ವವಿದ್ಯಾಲಯ ಮತ್ತು ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡ ಬಳಿಕ. ಆಸಕ್ತಿಯ ವಿಷಯದಲ್ಲಿ ಯಾವ ಯಾವ ಕೋರ್ಸ್‌ಗಳಿವೆ ಎಂಬುದು ಪಟ್ಟಿ ಮಾಡಿಕೊಳ್ಳಬೇಕು. ವಿಶ್ವವಿದ್ಯಾಲಯ ಇರುವ ಪ್ರದೇಶ, ಅಲ್ಲಿನ ಜೀವನ ಶೈಲಿ, ಪ್ರವೇಶದ ಅಗತ್ಯಗಳು ಮತ್ತು ಶಿಕ್ಷಣ ಮತ್ತು ಹಾಸ್ಟೆಲ್‌ ವೆಚ್ಚದ ಸಂಪೂರ್ಣ ಮಾಹಿತಿ ಸಿಗುತ್ತದೆ.

ಜರ್ಮನಿಯ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇದೆ. ಆದರೆ, ಹಾಸ್ಟೆಲ್‌ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಲ್ಲಿ ಶಿಕ್ಷಣ ಪಡೆಯಲು ಜರ್ಮನ್‌ ಭಾಷೆ ಗೊತ್ತಿರಬೇಕು. ಅದಕ್ಕಾಗಿ ರಾಜ್ಯ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಜರ್ಮನ್‌ ಕಲಿಕೆಯ ಕೇಂದ್ರಗಳಿರುತ್ತವೆ. ಅಲ್ಲಿ ಭಾಷೆ ಕಲಿಯಬಹುದಾಗಿದೆ.

ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ದೇಶದಲ್ಲೂ ಪ್ರವೇಶದ ನಿಯಮಾವಳಿಗಳು ಬೇರೆ ಬೇರೆಯದಾಗಿರುತ್ತವೆ. ಅರ್ಜಿ ಸಲ್ಲಿಕೆಗೆ ಇರುವ ಪ್ರಕ್ರಿಯೆಗಳು ಬೇರೆಯದಾಗಿರುತ್ತವೆ. ವಿಶ್ವವಿದ್ಯಾಲಯಗಳೂ ಪ್ರವೇಶದ ಬಗ್ಗೆ ವಿವರವಾದ ಮಾಹಿತಿ ನೀಡುತ್ತವೆ.

ಹೆಚ್ಚಿನ ವಿವರ ಮತ್ತು ಮಾರ್ಗದರ್ಶನಕ್ಕಾಗಿ ಕೋರ್ಸ್‌ ಮತ್ತು ವಿಶ್ವವಿದ್ಯಾಲಯಗಳಿಗಾಗಿ www.topuniversities.com/student-infoನಲ್ಲಿ ಈ ಕೆಳಗಿನ ಲಿಂಕ್‌ ನೋಡಬಹುದು– Course guides QS World University Rankings® 2018 QS World University Rankings by Subject University compari sonse.g.Oxford vs Cambridge Choosing a university section

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಷ್‌ ಭಾಷೆಯಲ್ಲಿ ಪರಿಣಿತಿ ಇರಬೇಕು. ಇದಕ್ಕಾಗಿTOEFL/IELTS ಇಂಗ್ಲಿಷ್‌ ಸ್ಪೀಕಿಂಗ್‌ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿಕೊಂಡಿರಬೇಕು. ಪದವಿ ಕೋರ್ಸ್‌ ಪ್ರವೇಶಕ್ಕಾಗಿGMAT/GRE ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಸ್ಕೈಪ್‌ ಮೂಲಕ ಸಂದರ್ಶನವನ್ನು ಎದುರಿಸಬೇಕು. ವಿದ್ಯಾರ್ಥಿ ಪಾಸ್‌ಪೋರ್ಟ್‌ ಹೊಂದುವುದು ಅಗತ್ಯ.

ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ, ಬ್ರಿಟನ್, ಜರ್ಮನಿ, ನಾರ್ಡಿಕ್‌ ದೇಶಗಳಲ್ಲಿರುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿ ವೇತನವನ್ನು ನೀಡುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT