ಶುಕ್ರವಾರ, ಜೂನ್ 18, 2021
24 °C

ಶೈಕ್ಷಣಿಕ ನೆರವಿಗೆ ಒಂದಿಷ್ಟು ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೀಡಿಂಗ್ ಎಗ್ಸ್

ಸಾಮಾನ್ಯವಾಗಿ ಮಕ್ಕಳಿಗೆ ಓದುವುದು, ಬರೆಯುವುದು ಎಂದರೆ ಅಲರ್ಜಿ. ಆದರೆ ಓದದೇ, ಬರೆಯದೇ ಇದ್ದರೆ ಮಕ್ಕಳು ಜಾಣರಾಗುವುದು ಹೇಗೆ ಎಂಬುದು ಪೋಷಕರ ಚಿಂತೆ. ಮಕ್ಕಳಿಗೆ ಓದುವುದನ್ನು ಅಭ್ಯಾಸ ಮಾಡಿಸಲು ಪೋಷಕರು ಹರಸಾಹಸ ಪಡುತ್ತಾರೆ. ಅಂತಹ ಪೋಷಕರಿಗಾಗಿಯೇ ಇಲ್ಲೊಂದು ಆ್ಯಪ್‌ ಇದೆ. ಅನೇಕ ಪ್ರಶಸ್ತಿಗಳನ್ನು ಮುಡಗೇರಿಸಿಕೊಂಡ ಈ ಆ್ಯಪ್ ಮಕ್ಕಳಿಗೆ ಓದಲು ಸಹಾಯ ಮಾಡುತ್ತದೆ. ಇದರಲ್ಲಿ ಆಟವಾಡುತ್ತಾ ಓದಬಹುದು. ಇದು ಮಕ್ಕಳಿಗೆ ಮನೋರಂಜನೆಯ ಜೊತೆಗೆ ಓದಲು ಮಾರ್ಗದರ್ಶನವನ್ನೂ ನೀಡುತ್ತದೆ. ಇದರಲ್ಲಿ 2000ಕ್ಕೂ ಹೆಚ್ಚು ಡಿಜಿಟಲ್ ಸ್ಟೋರಿ ಬುಕ್‌ಗಳು ಲಭ್ಯವಿವೆ. ಇದರಿಂದ ಮಕ್ಕಳು ಖುಷಿಯಾಗಿ, ಸುಲಭವಾಗಿ ಓದಲು ಕಲಿಯಬಹುದು. 

ಇದರಲ್ಲಿ 2 ರಿಂದ 13 ವರ್ಷದವರೆಗಿನ ಮಕ್ಕಳಿಗೆ ಓದಲು ಸಹಾಯವಾಗುವ ಮೆಟಿರೀಯಲ್ಸ್‌ಗಳಿವೆ. ಬಣ್ಣ ಬಣ್ಣದ ಆ್ಯನಿಮೇಷನ್‌ ಚಿತ್ರಗಳು ಇದರಲ್ಲಿ ಲಭ್ಯವಿರುವುದರಿಂದ ಮಕ್ಕಳು ಇಷ್ಟ‍ಪಡುತ್ತಾರೆ. ಇದು ಪದಕೋಶ, ಪದಗಳನ್ನು ಸ್ವಷ್ಟವಾಗಿ ಉಚ್ಚರಿಸುವ ರೀತಿ, ಧ್ವನಿಗ್ರಹಿಕೆ ಈ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಬಹುದು. ಇದರಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಓದುವುದನ್ನು ಕಲಿಸಲಾಗುತ್ತದೆ. 

ಶೇ 91ರಷ್ಟು ಪೋಷಕರು ತಮ್ಮ ಮಕ್ಕಳು ಈ ಆ್ಯಪ್‌ನ ಮೂಲಕ ಓದಿನಲ್ಲಿ ಅಭಿವೃದ್ಧಿ ಹೊಂದಿದ್ದನ್ನು ಗುರುತಿಸುತ್ತಾರೆ. ಪೋಷಕರು ಡ್ಯಾಶ್‌ಬೋರ್ಡ್‌ ಮೂಲಕ ಮಕ್ಕಳ ಓದಿನ ಬೆಳವಣಿಗೆಯನ್ನು ತಕ್ಷಣವೇ ಪರಿಶೀಲಿಸಬಹುದು. ಪ್ರಗತಿ ಪರಿಶೀಲನೆಯನ್ನು ವಿವರವಾಗಿ ನೋಡಬಹುದು. ಆ ಮೂಲಕ ತಮ್ಮ ಮಗು ಕಲಿಕೆಯಲ್ಲಿ ಬೆಳವಣಿಗೆ ಆಗುತ್ತಿದೆಯೇ? ಅಥವಾ ಮಗುವಿನ ಮೇಲೆ ಹೆಚ್ಚಿನ ಗಮನ ನೀಡಬೇಕೇ ಎಂಬುದನ್ನು ಇದು ತಿಳಿಸುತ್ತದೆ. 

ಸೆಂಟೆನ್ಸ್ ಮಾಸ್ಟರ್ ಪ್ರೋ

ಭಾಷಾ ಕೌಶಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಇರುವ ಈ ಆ್ಯಪ್ ಎಳೆಯರು ತಮ್ಮ ಭಾಷಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ವಾಕ್ಯವನ್ನು ಯಾವೆಲ್ಲ ರೀತಿಯಲ್ಲಿ ಅಭಿವೃದ್ಧಿಗೊಳಿಸಬಹುದು ಎಂಬುದನ್ನು ಆ್ಯಪ್‌ ಕಲಿಸುತ್ತದೆ. ಇದರಲ್ಲಿ ಮಕ್ಕಳು ತಮಗೆ ತಾವೇ ಚಾಲೆಂಜ್ ಹಾಕಿಕೊಂಡು ಶಬ್ದಗಳನ್ನು ಹೊಂದಿಸುವ ಮೂಲಕ ವಾಕ್ಯಗಳನ್ನು ರಚಿಸಬಹುದು. ಇದು ಆಟದ ರೂಪದಲ್ಲಿ ಇದ್ದು ಒಂದಷ್ಟು ಪದಗಳನ್ನು ನೀಡುತ್ತಾರೆ. ಜೊತೆಗೆ ಕೆಲವೊಂದಷ್ಟು ಸರಿಯಿಲ್ಲದ ವಾಕ್ಯವನ್ನು ನೀಡುತ್ತಾರೆ. ಮೊದಲೇ ನೀಡಿರುವ ಶಬ್ದಗಳನ್ನು ಬಳಸಿಕೊಂಡು ಮಕ್ಕಳು ತಮಗೆ ನೀಡಿದ ಸಮಯದಲ್ಲಿ ಸರಿಯಾದ ವಾಕ್ಯವನ್ನು ರಚಿಸಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು