ಗುರುವಾರ , ಆಗಸ್ಟ್ 13, 2020
21 °C
ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

ವಿದ್ಯಾರ್ಥಿಗಳ ಉತ್ಸಾಹ, ಎದ್ದುಕಂಡ ಶಿಕ್ಷಣ ಇಲಾಖೆಯ ಪರಿಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುನಿರೀಕ್ಷೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಬೆಳಿಗ್ಗೆ ರಾಜ್ಯದ 2,879 ಕೇಂದ್ರಗಳಲ್ಲಿ ಉತ್ಸಾಹದಿಂದಲೇ ಆರಂಭವಾಗಿದೆ.

ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಮುಖಗವಸು ತೊಟ್ಟು ಪರೀಕ್ಷಾ ಕೇಂದ್ರಗಳಿಗೆ ಬರತೊಡಗಿದ್ದರು. ಅಂತರ ಕಾಯ್ದುಕೊಳ್ಳಲು ಬಹುತೇಕ ಎಲ್ಲ ಕಡೆ ಕಟ್ಟು ನಿಟ್ಟಿನ ವ್ಯವಸ್ಥೆ ಮಾಡಲಾಗಿತ್ತು. ಧ್ವನಿವರ್ಧಕ ಮೂಲಕ ವಿದ್ಯಾರ್ಥಿ ಗಳಿಗೆ ಮನವರಿಕೆ ಮಾಡಲಾಯಿತು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನಗರದ ರಾಜಾಜಿನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಮಾತನಾಡಿಸಿ ಶುಭಾಶಯ ಹೇಳಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಗೆ ಆರೋಗ್ಯ ಕಾರ್ಯಕರ್ತ ರು ಅಥವಾ ಆಶಾ ಕಾರ್ಯಕರ್ತರು ಇದ್ದುದು ಕಂಡುಬಂತು. ಸ್ಕೌಟ್ ವಿದ್ಯಾರ್ಥಿಗಳು ಸಹ ಲವಲವಿಕೆಯಿಂದ ಸೇವೆ ಸಲ್ಲಿಸಿದರು.

ಇದನ್ನೂ ಓದಿ... ಶಿರಾ | ಪರೀಕ್ಷೆ ಬರೆಯಲು ಬಂದ ಕ್ವಾರಂಟೈನ್‌ನಲ್ಲಿದ್ದ ವಿದ್ಯಾರ್ಥಿ ಆಸ್ಪತ್ರೆಗೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು