ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಹಿನ್ನೋಟ | ಚಿಕ್ಕಮಗಳೂರು: ಎರಡು ಬಾರಿ ಸಂಸದರಾಗಿದ್ದ ಡಿ.ಬಿ.ಚಂದ್ರೇಗೌಡ

ಎರಡು ಬಾರಿ ಗೆಲುವು; ಒಂದೇ ವರ್ಷಕ್ಕೆ ರಾಜೀನಾಮೆ
Published 12 ಏಪ್ರಿಲ್ 2024, 6:08 IST
Last Updated 12 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಲೋಕಸಭೆ ಇತಿಹಾಸದಲ್ಲಿ ಡಿ.ಬಿ.ಚಂದ್ರೇಗೌಡ ಹೆಸರು ಅಚ್ಚಳಿಯದೆ ಉಳಿದು ಹೋಗಿದೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾದ ಅವರು, ಎರಡನೇ ಬಾರಿ ಒಂದೇ ವರ್ಷಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು.

ಪ್ರಜಾ ಸೋಷಿಯಲಿಸ್ಟ್ ಪಕ್ಷದ(ಪಿಎಸ್‌ಪಿ) ಎಂ.ಹುಚ್ಚೇಗೌಡ 1967ರಲ್ಲಿ ಗೆದ್ದಿದ್ದರು. ನಂತರ 1971ರಲ್ಲಿ ನಡೆದ 5ನೇ ಲೋಕಸಭೆ ಚುನಾವಣೆ ವೇಳೆಗೆ 4,56,969 ಮತದಾರರು ನೋಂದಣಿ ಮಾಡಿಸಿಕೊಂಡಿದ್ದರು. 

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಭಾರತೀಯ ಜನಸಂಘ ತಯಾರಾಗಿತ್ತು. ಬಿ.ವಿ.ಚಂದ್ರಶೇಖರ್ ಅವರನ್ನು ಚಂದ್ರೇಗೌಡರ ವಿರುದ್ಧ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. 2,71,207 ಮತಗಳು ಚಲಾವಣೆಗೊಂಡಿದ್ದವು. ಈ ಪೈಕಿ 8,908 ಮತಗಳು ತಿರಸ್ಕೃತಗೊಂಡಿದ್ದವು.

ಡಿ.ಬಿ.ಚಂದ್ರೇಗೌಡ ಅವರು 1,88,151 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ಜನಸಂಘದ ಬಿ.ವಿ.ಚಂದ್ರಶೇಖರ್‌ 67,742 ಮತ ಪಡೆದಿದ್ದರು. ಒಟ್ಟು ನಾಲ್ವರು ಸ್ಪರ್ಧಿಸಿದ್ದರು. ಮೂಡಿಗೆರೆ ತಾಲ್ಲೂಕಿಗೆ ಸೀಮಿತವಾಗಿದ್ದ ದಾರದಹಳ್ಳಿಯ ಚಂದ್ರೇಗೌಡ ಅವರ ರಾಜಕೀಯ ಪಯಣ ದೆಹಲಿಗೆ ತಲುಪಿತು. ಉತ್ತಮ ಸಂಸದೀಯ ಪಟು ಎಂಬ ಹೆಸರನ್ನೂ ಗಳಿಸಿದ್ದರು.

1977ರಲ್ಲಿ 6ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಮತ್ತೊಮ್ಮೆ ಸ್ಪರ್ಧಿಸುವ ಡಿ.ಬಿ.ಚಂದ್ರೇಗೌಡ, ಹಿಂದಿನ ಚುನಾವಣೆಯಲ್ಲಿ ಪಡೆದಿದ್ದ ಮತಕ್ಕೆ ಹೆಚ್ಚು ಮತಗಳನ್ನು ಪಡದು ಜಯ ಸಾಧಿಸಿದ್ದರು. ‌2,08,239 ಮತಗಳನ್ನು ಪಡೆದು ಚಂದ್ರೇಗೌಡ ಗೆಲುವು ಕಂಡರೆ, ಬಿಎಲ್‌ಡಿ(ಭಾರತೀಯ ಲೋಕ ದಳ) ಪಕ್ಷದ ಬಿ.ಎಲ್‌.ಸುಬ್ಬಮ್ಮ ಅವರು 1,43,671 ಮತಗಳನ್ನು ಪಡೆದು ಸೋಲು ಕಂಡಿದ್ದರು.

‘ಕ್ಷೇತ್ರ ಬಿಟ್ಟುಕೊಟ್ಟರು’

ಚಂದ್ರೇಗೌಡ ಅವರು ಈ (1977ರ ಗೆಲುವು)  ಅವಧಿ ಪೂರೈಸುವುದಿಲ್ಲ. ರಾಯಬರೇಲಿ ಸೋಲು ಕಂಡಿದ್ದ ಇಂದಿರಾ ಗಾಂಧಿ ಅವರು ಬೇರೆ ಕ್ಷೇತ್ರದಲ್ಲಿ ನಿಂತು ಗೆಲ್ಲಲು ಸುರಕ್ಷಿತ ಕ್ಷೇತ್ರ ಹುಡುಕಿದ್ದರು. ಚಿಕ್ಕಮಗಳೂರು ಸುರಕ್ಷಿತ ಎಂಬ ಕಾರಣಕ್ಕೆ ಇಲ್ಲಿಂದ ಸ್ಪರ್ಧೆಗೆ ಬಯಸಿದ್ದರು. ಚಂದ್ರೇಗೌಡ ಅವರು ರಾಜೀನಾಮೆ ನೀಡಿ ಕ್ಷೇತ್ರ ಬಿಟ್ಟುಕೊಟ್ಟರು. 1978ರಲ್ಲಿ ಉಪ ಚುನಾವಣೆ ನಡೆದು  ಇಂದಿರಾಗಾಂಧಿ ಜಯ ಸಾಧಿಸಿದ್ದರು. ಮುಂದಿನ ಚುನಾವಣೆಗಳಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚಂದ್ರೇಗೌಡ ಸ್ಪರ್ಧೆ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT