ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬಿಜೆಪಿಯು ಜನರನ್ನು ಸರ್ವೋಚ್ಚ ಎಂದು ಪರಿಗಣಿಸಿದರೆ, ಕಾಂಗ್ರೆಸ್‌ ಒಂದು ಕುಟುಂಬವನ್ನು ಸರ್ವೋಚ್ಚ ಎಂದು ಪರಿಗಣಿಸುತ್ತದೆ. ಬಿಜೆಪಿಯು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ. ಕಾಂಗ್ರೆಸ್‌ ಪಕ್ಷವು ದೇಶ‌ದ ಭದ್ರತಾ ಪಡೆಗಳ ಅಧಿಕಾರ, ಶೌರ್ಯವನ್ನು ಪ್ರಶ್ನಿಸುವಾಗ ನೋವಾಗುತ್ತದೆ. ಸೇನೆಯು 2016ರಲ್ಲಿ ನಡೆಸಿರುವ ನಿರ್ದಿಷ್ಟ ದಾಳಿಗೆ ಕಾಂಗ್ರೆಸ್‌ ಪುರಾವೆಗಳನ್ನು ಕೇಳಿದೆ. ಇಡೀ ವಿಶ್ವಕ್ಕೇ ಇದರ ಪುರಾವೆ ಲಭಿಸಿದೆ. ಆದರೆ ಆ ಪಕ್ಷಕ್ಕೆ ಲಭಿಸಿಲ್ಲ. ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯಿಂದ ದೇಶದ ಹಣ ಹಾಗೂ ಸಂಪನ್ಮೂಲ ಉಳಿತಾಯವಾಗಲಿದೆ.

–ರಾಜನಾಥ್ ಸಿಂಗ್‌, ಕೇಂದ್ರ ಸಚಿವ

**

ಬಿಜೆಪಿಯು ಹಣ, ಅಧಿಕಾರ ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿದೆ. ಕಾಂಗ್ರೆಸ್‌ ಜನರಿಗಾಗಿ ದಣಿವರಿಯದೆ ದುಡಿಯುತ್ತಿದೆ. ನಾನು ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ ಎಲ್ಲಾ ಮುಖಂಡರನ್ನು ಭೇಟಿಯಾಗಿದ್ದೇನೆ. ಒಗ್ಗಟ್ಟು, ಧೈರ್ಯ, ಕಠಿಣ ಶ್ರಮದ ಮೂಲಕ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹೆಮ್ಮೆ ತಂದಿದೆ. ಬಿಜೆಪಿಯು ಸುಳ್ಳು ಹರಡುತ್ತಿದೆ. ಆದರೆ ಜನರು ಸತ್ಯದ ಜೊತೆಗೆ ನಿಲ್ಲುತ್ತಾರೆಂಬ ವಿಶ್ವಾಸವಿದೆ

–ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT