ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಡಿಎಂಕೆ ಅಭ್ಯರ್ಥಿಯ ಆಸ್ತಿ ₹ 583 ಕೋಟಿ

Published 26 ಮಾರ್ಚ್ 2024, 14:35 IST
Last Updated 26 ಮಾರ್ಚ್ 2024, 14:35 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಈರೋಡ್‌ ಲೋಕಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಆತ್ರಲ್‌ ಅಶೋಕ್‌ ಕುಮಾರ್‌ ಅವರು ಒಟ್ಟು ₹ 583.48 ಕೋಟಿ ಆಸ್ತಿ ಹೊಂದಿದ್ದಾರೆ. 

₹ 526.53 ಕೋಟಿ ಚರಾಸ್ತಿ ಹಾಗೂ ₹ 56.95 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಅಶೋಕ್‌ ಕುಮಾರ್‌ ಪತ್ನಿ ಕರುಣಾಂಬಿಕಾ ಅವರ ಬಳಿ ₹ 69.98 ಕೋಟಿ ಮೌಲ್ಯದ ಆಸ್ತಿ ಇದೆ. ಇಬ್ಬರ ಬಳಿ ತಲಾ 10.1 ಕೆ.ಜಿ ಹಾಗೂ 10.6 ಕೆ.ಜಿ ಚಿನ್ನ ಇದೆ. 

53 ವರ್ಷದ ಅಶೋಕ್‌ ಕುಮಾರ್‌ ಅವರು ದಿ ಇಂಡಿಯನ್‌ ಪಬ್ಲಿಕ್‌ ಸ್ಕೂಲ್‌ (ಟಿಐಪಿಎಸ್‌) ಮತ್ತು ಅಮೆಕ್ಸ್‌ ಅಲಾಯ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಸ್ಥಾಪಕ ಸದಸ್ಯ ಮತ್ತು ನಿರ್ದೇಶಕರಾಗಿದ್ದಾರೆ. 

ಕೊಯಮತ್ತೂರಿನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅವರು ಅಮೆರಿಕದ ಕೆಂಟುಕಿಯ ಲೂಯಿವಿಲ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಹಾಗೂ ಇಂಡಿಯಾನಪೊಲೀಸ್ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ಇತರ ಅಭ್ಯರ್ಥಿಗಳ ಆಸ್ತಿ ವಿವರ

ರಾಧಿಕಾ ಶಾಂತಕುಮಾರ್ (ಬಿಜೆಪಿ, ವಿರುಧುನಗರ ಕ್ಷೇತ್ರ); ₹ 53.45 ಕೋಟಿ 

ವಿಜಯ ಪ್ರಭಾಕರನ್ (ಡಿಎಂಡಿಕೆ, ವಿರುಧುನಗರ ಕ್ಷೇತ್ರ); ₹ 17.95 ಕೋಟಿ

ಟಿ.ಆರ್‌.ಬಾಲು (ಡಿಎಂಕೆ, ಶ್ರೀಪೆರಂಬದೂರು); ₹ 17.40 ಕೋಟಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT