ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಮೊರಾದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಕುಮಾರ್‌ ನಿಧನ

Published 20 ಏಪ್ರಿಲ್ 2024, 15:47 IST
Last Updated 20 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಲಖನೌ: ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕುನ್ವರ್ ಸರ್ವೇಶ್ ಕುಮಾರ್ (72) ಅವರು ಶನಿವಾರ ನಿಧನರಾಗಿದ್ದಾರೆ. 

‘ಅವರಿಗೆ ಗಂಟಲಲ್ಲಿ ಕೊಂಚ ಸಮಸ್ಯೆಯಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶುಕ್ರವಾರ ಅವರು ತಪಾಸಣೆಗಾಗಿ ದೆಹಲಿಯ ಏಮ್ಸ್‌ಗೆ ಹೋಗಿದ್ದವರು, ಅಲ್ಲಿಯೇ ನಿಧನರಾದರು’ ಎಂದು ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಚೌಧರಿ ತಿಳಿಸಿದರು.

ಮೊರಾದಾಬಾದ್‌ ಕ್ಷೇತ್ರದಲ್ಲಿ ಮತದಾನವು ಮೊದಲ ಹಂತದಲ್ಲಿ ಶುಕ್ರವಾರ ನಡೆದಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT