ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ: ಹಿಮಾಚಲದಿಂದ ಗೆದ್ದ ನಾಲ್ಕನೇ ಮಹಿಳೆ

Published 5 ಜೂನ್ 2024, 16:28 IST
Last Updated 5 ಜೂನ್ 2024, 16:28 IST
ಅಕ್ಷರ ಗಾತ್ರ

ಶಿಮ್ಲಾ: ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ನಟಿ ಕಂಗನಾ ರನೌತ್ ಅವರು ಹಿಮಾಚಲ ಪ್ರದೇಶದಿಂದ ಇದುವರೆಗೂ ಗೆದ್ದ ಮಹಿಳೆಯರ ಪೈಕಿ ನಾಲ್ಕನೆಯವರಾಗಿದ್ದು, ರಾಜಕುಟುಂಬಗಳಿಗೆ ಸೇರದ ಮೊದಲ ಮಹಿಳೆಯಾಗಿದ್ದಾರೆ.

ಕಂಗನಾ ಅವರು ರಾಮಪುರ ರಾಜಮನೆತನಕ್ಕೆ ಸೇರಿದ ವಿಕ್ರಮಾದಿತ್ಯ ಸಿಂಗ್ ಅವರನ್ನು 74, 755 ಮತಗಳ ಅಂತರದಿಂದ ಸೋಲಿಸಿದ್ದಾರೆ.   

ಹಿಂದೆ, 1952ರಲ್ಲಿ, ಮಂಡಿ ಕ್ಷೇತ್ರದಿಂದ ಕಪುರ್ತಲಾ ರಾಜಮನೆತನದ ರಾಜಕುಮಾರಿ ಅಮೃತ್ ಕೌರ್ ಗೆಲುವು ಸಾಧಿಸಿದ್ದರು. ಅವರು ದೇಶದ ಮೊದಲ ಆರೋಗ್ಯ ಸಚಿವೆಯಾಗಿದ್ದರು.

ಚಂದ್ರೇಶ್ ಕುಮಾರಿ 1984ರಲ್ಲಿ ಕಾಂಗ್ರಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಜೋಧ್‌ಪುರ ರಾಜಮನೆತನಕ್ಕೆ ಸೇರಿದ ಅವರು ಮದುವೆಯಾಗಿ ಹಿಮಾಚಲಕ್ಕೆ ಬಂದಿದ್ದರು.

ರಾಮಪುರ ರಾಜಮನೆತನಕ್ಕೆ ಸೇರಿದ ಪ್ರತಿಭಾ ಸಿಂಗ್, ಮಂಡಿ ಕ್ಷೇತ್ರದಿಂದ 2004, 2013 ಮತ್ತು 2021ರಲ್ಲಿ ಗೆದ್ದಿದ್ದರು. 

ಕಂಗನಾ ಮಂಡಿ ಕ್ಷೇತ್ರದಿಂದ ಗೆದ್ದಿರುವ ಮೂರನೇ ಮಹಿಳೆಯಾಗಿದ್ದಾರೆ. ಮಂಡಿಯಲ್ಲಿ 19 ಚುನಾವಣೆಗಳ ಪೈಕಿ 13 ಬಾರಿ ರಾಜಮನೆತನಗಳಿಗೆ ಸೇರಿದವರೇ ಗೆದ್ದಿದ್ದಾರೆ. ಹಿಮಾಚಲದ ಎಲ್ಲ ನಾಲ್ಕು ಲೋಕಸಭಾ ಸ್ಥಾನಗಳಲ್ಲೂ ಬಿಜೆಪಿ ಜಯ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT