ಲಖನೌ: ಸಮಾಜವಾದಿ ಪಕ್ಷವು (ಎಸ್ಪಿ) ಉತ್ತರ ಪ್ರದೇಶದ ಏಳು ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಅಭ್ಯರ್ಥಿಗಳನ್ನು ಪ್ರಕಟಿಸಿತು. ಇದರೊಂದಿಗೆ ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ರಾಜ್ಯದಲ್ಲಿ ಒಟ್ಟು 57 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.

ಮಾಜಿ ಸಂಸದ ಭೀಷ್ಮ್ ಶಂಕರ್ ತಿವಾರಿ ಅವರನ್ನು ಡುಮರಿಯಾಗಂಜ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಶ್ರಾವಸ್ತಿ ಕ್ಷೇತ್ರದ ಟಿಕೆಟ್ಅನ್ನು ಹಾಲಿ ಸಂಸದ ರಾಮ್ ಶಿರೋಮಣಿ ವರ್ಮಾ ಅವರಿಗೆ ನೀಡಿದೆ. ಕಳೆದ ಸಲ ಬಿಎಸ್ಪಿಯಿಂದ ಗೆದ್ದಿದ್ದ ವರ್ಮಾ, ಎಸ್ಪಿ ಸೇರಿದ್ದರು. ಸಂತ ಕಬೀರ್ ನಗರ ಕ್ಷೇತ್ರದಿಂದ ಮಾಜಿ ಶಾಸಕ ಲಕ್ಷ್ಮೀಕಾಂತ್ ಅವರನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.