ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲಿಯನೇರ್ ಉದ್ಯಮಿ ಮಿತ್ರರಿಗಾಗಿ ಸರ್ಕಾರ ನಡೆಸುತ್ತಿರುವ ಮೋದಿ: ರಾಹುಲ್ ಗಾಂಧಿ

Published 28 ಏಪ್ರಿಲ್ 2024, 9:04 IST
Last Updated 28 ಏಪ್ರಿಲ್ 2024, 9:04 IST
ಅಕ್ಷರ ಗಾತ್ರ

ಕಟಕ್: ಪ್ರಧಾನಿ ನರೇಂದ್ರ ಮೋದಿ ಬಿಲಿಯನೇರ್ ಉದ್ಯಮಿ ಮಿತ್ರರಿಗಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪುನರುಚ್ಚರಿಸಿದ್ದಾರೆ.

ಒಡಿಶಾದ ಸಲೇಪುರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

'ಚುನಾವಣಾ ಕಣದಲ್ಲಿ ಬಿಜೆಪಿ ಮತ್ತು ಬಿಜೆಡಿ ಪರಸ್ಪರ ಸ್ಪರ್ಧಿಸುತ್ತಿದ್ದರೂ ವಾಸ್ತವದಲ್ಲಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದೆ' ಎಂದು ಅವರು ಟೀಕಿಸಿದ್ದಾರೆ.

'ಇದನ್ನು ಪಾಲುದಾರಿಕೆ ಅಥವಾ ಮದುವೆ ಎಂದು ಬೇಕಾದರೆ ಕರೆಯಿರಿ. ಆದರೆ ಬಿಜೆಪಿ ಹಾಗೂ ಬಿಜೆಡಿ ಎರಡೂ ಒಟ್ಟಾಗಿವೆ' ಎಂದು ಅವರು ಹೇಳಿದ್ದಾರೆ.

'ಪಟ್ನಾಯಕ್ ಸಿಎಂ ಆಗಿರಬಹುದು. ಆದರೆ ಸರ್ಕಾರವನ್ನು ಪಟ್ನಾಯಕ್ ಆಪ್ತ ವಿ.ಕೆ.ಪಾಂಡಿಯನ್ ನಡೆಸುತ್ತಾರೆ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

'ಬಿಜೆಪಿ ಹಾಗೂ ಬಿಜೆಡಿ ಸೇರಿ ಒಡಿಶಾದ ಸಂಪತ್ತನ್ನು ಲೂಟಿ ಹೊಡೆದಿವೆ' ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT