ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024| 25–30ರ ವಯೋಮಾನದ 2 ಸಾವಿರ ಅಭ್ಯರ್ಥಿಗಳ ಸ್ಪರ್ಧೆ: ADR

Published 23 ಮೇ 2024, 14:33 IST
Last Updated 23 ಮೇ 2024, 14:33 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ 58 ಕ್ಷೇತ್ರಗಳಿಗೆ ಶನಿವಾರ ನಡೆಯಲಿದೆ. ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ 7 ಹಂತಗಳಲ್ಲಿ 80 ವರ್ಷ ಮೇಲಿನ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ್ತೊಂದೆಡೆ 25ರಿಂದ 30 ವರ್ಷದೊಳಗಿನ 2,642 ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸುತ್ತಿದ್ದಾರೆ ಎಂದು ಅಸೋಸಿಯೇಷನ್‌ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ ಹೇಳಿದೆ.

ಒಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿರುವ 8,360 ಅಭ್ಯರ್ಥಿಗಳ ಪೈಕಿ 8,337 ಅಭ್ಯರ್ಥಿಗಳ ಮಾಹಿತಿಯನ್ನು ಈ ಸಂಸ್ಥೆ ಸಂಗ್ರಹಿಸಿ, ವಿಶ್ಲೇಷಿಸಿದೆ. 

ಮೊದಲ ಹಂತ: 25ರಿಂದ 40ರ ವಯೋಮಾನದ 505 ಅಭ್ಯರ್ಥಿಗಳು ಕಣದಲ್ಲಿದ್ದರು. 41ರಿಂದ 60ರ ವಯೋಮಾನದವರು 849 ಅಭ್ಯರ್ಥಿಗಳು ಮತ್ತು 80 ವರ್ಷದ ಮೇಲಿನ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದರು.

2ನೇ ಹಂತ: 25ರಿಂದ 40ರ ವಯೋಮಾನದ 363 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 41ರಿಂದ 60ರ ವಯೋಮಾನದ 578 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 61ರಿಂದ 80ರ ವಯೋಮಾನದ 249 ಅಭ್ಯರ್ಥಿಗಳು ಹಾಗೂ 80 ವಯೋಮಾನ ಮೀರಿದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.

3ನೇ ಹಂತ: 25ರಿಂದ 40ರ ವಯೋಮಾನದ 411 ಅಭ್ಯರ್ಥಿಗಳು, 41ರಿಂದ 60 ವರ್ಷದೊಳಗಿನ 712 ಅಭ್ಯರ್ಥಿಗಳು ಕಣದಲ್ಲಿದ್ದರು. 61ರಿಂದ 80 ವಯೋಮಾನದ 228 ಅಭ್ಯರ್ಥಿಗಳು ಹಾಗೂ 84 ವರ್ಷದ ಒಬ್ಬರು ಈ ಹಂತದಲ್ಲಿ ಸ್ಪರ್ಧಿಸಿದ್ದರು.

4ನೇ ಹಂತ: 25ರಿಂದ 40ರ ವಯೋಮಾನದ 642 ಅಭ್ಯರ್ಥಿಗಳು ಕಣದಲ್ಲಿದ್ದರು. 41–60ರ ವಯೋಮಾನದ 842 ಅಭ್ಯರ್ಥಿಗಳು ಹಾಗೂ 61ರಿಂದ 80ರ ವಯೋಮಾನದ 226 ಅಭ್ಯರ್ಥಿಗಳು ಕಣದಲ್ಲಿದ್ದರು.

5ನೇ ಹಂತ: ಮೇ 20ರಂದು ನಡೆದ 5ನೇ ಹಂತದ ಚುನಾವಣೆಯಲ್ಲಿ 25ರಿಂದ 40ರ ವಯೋಮಾನದ 207 ಅಭ್ಯರ್ಥಿಗಳು, 41–60ರ ವಯೋಮಾನದ 384 ಅಭ್ಯರ್ಥಿಗಳು ಹಾಗೂ 61ರಿಂದ 80 ವರ್ಷದೊಳಗಿನ 103 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಹಂತದಲ್ಲಿ 82 ವರ್ಷದ ಒಬ್ಬರು ಇದ್ದರು.

6ನೇ ಹಂತ: 58 ಕ್ಷೇತ್ರಗಳಿಗೆ ಶನಿವಾರ ನಡೆಯಲಿದೆ. ಈ ಹಂತದಲ್ಲಿ 25ರಿಂದ 40ರ ವಯೋಮಾನದ 271 ಅಭ್ಯರ್ಥಿಗಳು, 41ರಿಂದ 60ರ ವಯೋಮಾನದ 436 ಅಭ್ಯರ್ಥಿಗಳು ಹಾಗೂ 61ರಿಂದ 80 ವರ್ಷದೊಳಗಿನವರು 159 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

7ನೇ ಹಂತ: ಜೂನ್ 1ರಂದು ನಡೆಯಲಿರುವ 7ನೇ ಹಾಗೂ ಕೊನೆಯ ಹಂತದ ಮತದಾನದಲ್ಲಿ 25ರಿಂದ 40ರ ವಯೋಮಾನದ 243 ಅಭ್ಯರ್ಥಿಗಳು, 41ರಿಂದ 60ರ ವಯೋಮಾನದ 481 ಅಭ್ಯರ್ಥಿಗಳು ಹಾಗೂ 61ರಿಂದ 80 ವರ್ಷದೊಳಗಿನ 177 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಹಂತದಲ್ಲಿ 80 ವರ್ಷ ಮೇಲಿನ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT