ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ, ವಿಧಾನಸಭಾ ಚುನಾವಣೆಗಳಲ್ಲಿ ಇತಿಹಾಸ ಸೃಷ್ಟಿಸಲಿದೆ ಒಡಿಶಾ: ಪ್ರಧಾನಿ ಮೋದಿ

Published 11 ಮೇ 2024, 6:31 IST
Last Updated 11 ಮೇ 2024, 6:31 IST
ಅಕ್ಷರ ಗಾತ್ರ

ಭುವನೇಶ್ವರ: ರಾಜ್ಯದಲ್ಲಿ ಏಕಕಾಲಕ್ಕೆ ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಒಡಿಶಾ ಇತಿಹಾಸ ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ ಅವರು ಇಂದು (ಶನಿವಾರ) ಕಂಧಮಾಲ್‌, ಬೋಲಂಗಿರ್‌ ಹಾಗೂ ಬರ್‌ಗಢ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅದಕ್ಕೂ ಮುನ್ನ ಎಕ್ಸ್‌/ಟ್ವಿಟರ್‌ ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಈ ಚುನಾವಣೆಗಳಲ್ಲಿ ಒಡಿಶಾ ಇತಿಹಾಸ ನಿರ್ಮಿಸಲಿದೆ ಎಂಬುದು ಸ್ಪಷ್ಟ' ಎಂದಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ ನಡೆಸಿದ ರೋಡ್‌ ಶೋ ದೃಶ್ಯಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಪ್ರಚಾರದ ವೇಳೆ ಮೋದಿ, ಒಡಿಶಾದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಸರ್ಕಾರವು ಜನರೊಂದಿಗೆ ಸಂಪರ್ಕ ಕಡಿದುಕೊಂಡಿದೆ ಎಂದು ಆರೋಪಿಸಿದ್ದ ಮೋದಿ, ರಾಜ್ಯದ ಜನರೊಂದಿಗಿನ ತಮ್ಮ ಸಂಬಂಧವು ಭಾಷೆಯ ವ್ಯತ್ಯಾಸವನ್ನೂ ಮೀರಿ ನಿಕಟವಾಗಿದೆ ಎಂದಿದ್ದರು.

'ರಾಜ, ಮಹಾರಾಜರ ಕಾಲದಲ್ಲಿಯೂ, ಆಡಳಿತಗಾರರು ಮತ್ತು ಗ್ರಾಮೀಣ ಜನರು, ಸಾಮಾನ್ಯರ ನಡುವೆ ಬಾಂಧವ್ಯ ಇರುತ್ತಿತ್ತು. ಅದು ಈಗ ಒಡಿಶಾದಲ್ಲಿ ಸಂಪೂರ್ಣವಾಗಿ ಮಾಯವಾಗಿದೆ' ಎಂದು ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT