ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS polls | ‘ಅಗ್ನಿಪಥ’ ಯೋಜನೆ ಕಸದ ಬುಟ್ಟಿಗೆ: ರಾಹುಲ್ ಗಾಂಧಿ

Published 18 ಮೇ 2024, 23:15 IST
Last Updated 18 ಮೇ 2024, 23:15 IST
ಅಕ್ಷರ ಗಾತ್ರ

ನವದೆಹಲಿ: ‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದರೆ, ‘ಅಗ್ನಿಪಥ’ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಜಿಎಸ್‌ಟಿ ಅನ್ನು ಸರಳೀಕರಣಗೊಳಿಸುತ್ತೇವೆ ಮತ್ತು ಬೃಹತ್ ಉದ್ದಿಮೆದಾರರ ಬದಲಿಗೆ ಸಣ್ಣ ಉದ್ದಿಮೆದಾರರಿಗೆ ನೆರವು ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಆಸಕ್ತಿಕರ ವಿಚಾರ ಏನೆಂದರೆ, ನಾನು ಎಎಪಿಗೆ ಮತ ಹಾಕುತ್ತೇನೆ, ಅರವಿಂದ ಕೇಜ್ರಿವಾಲ್ ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನೊಂದಿಗೆ ಚರ್ಚೆಗೆ ಸಿದ್ಧರಿಲ್ಲ. ಏಕೆಂದರೆ, ಅದಾನಿ ಅವರಂತಹ ಉದ್ಯಮಪತಿಗಳೊಂದಿಗಿನ ನಂಟಿನ ಬಗ್ಗೆ ಮತ್ತು ಚುನಾವಣಾ ಬಾಂಡ್‌ಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಉತ್ತರಿಸಲು ಅವರಿಗೆ ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT