ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಹೇಳಿಕೆ: ರಣವೀರ್‌ ಸಿಂಗ್‌ DeepFake ವಿಡಿಯೊ: ದೂರು ದಾಖಲಿಸಿದ ನಟ

Published 22 ಏಪ್ರಿಲ್ 2024, 9:33 IST
Last Updated 22 ಏಪ್ರಿಲ್ 2024, 9:33 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ರಣವೀರ್‌ ಅವರ ಡೀಪ್‌ ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ರಣವೀರ್‌ ಸಿಂಗ್‌ ಸೈಬರ್‌ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.

ರಣವೀರ್‌ ಸಿಂಗ್‌ ಅವರು ವಾರಾಣಸಿಗೆ ಭೇಟಿ ನೀಡಿದ್ದ ವೇಳೆ ಎಎನ್‌ಐ ವರದಿಗಾರರೊಂದಿಗೆ ಮಾತನಾಡಿದ ವಿಡಿಯೊವನ್ನು ಕೃತಕ ಬುದ್ಧಿಮತ್ತೆ ಮೂಲಕ ತಿರುಚಿ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದಂತೆ ಡೀಪ್‌ಫೇಕ್‌ ಮಾಡಲಾಗಿದೆ.

ಈ ಬಗ್ಗೆ ಅಭಿಮಾನಿಗಳಗೆ ಮಾಹಿತಿ ನೀಡಿದ್ದ ರಣವೀರ್‌ ‘ ಡೀಪ್‌ ಫೇಕ್‌ ಬಗ್ಗೆ ಜಾಗರೂಕರಾಗಿರಿ ಸ್ನೇಹಿತರೆ’ ಎಂದು ಹೇಳಿದ್ದರು.

ರಣವೀರ್‌ ಸಿಂಗ್‌ ಅವರ ಡೀಪ್‌ ಫೇಕ್‌ ವಿಡಿಯೊ ಮಾಡಿರುವುದರ ಬಗ್ಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ರಣವೀರ್‌ ಸಿಂಗ್‌ ಅವರ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದೆ ರಣವೀರ್‌ ಸಿಂಗ್‌ ಮತ್ತು ಕೃತಿ ಸನೂನ್‌ ಅವರು ವಾರಾಣಸಿ ಮತ್ತು ಕಾಶಿಗೆ ಭೇಟಿ ನೀಡಿದ್ದ ವೇಳೆ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. 

ಡೀಪ್‌ ಫೇಕ್‌ದ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರಣವೀರ್‌ ಸಿಂಗ್‌ ಅವರ ಡೀಪ್‌ ಫೇಕ್‌ ವಿಡಿಯೊದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ವೇಳೆ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ, ಎರಡು ಬಾರಿ ಪ್ರಧಾನಿಯಾಗಿದ್ದರೂ ದೇಶದ ಕಳಪೆ ಆರ್ಥಿಕತೆಯನ್ನು ಸುಧಾರಿಸಲಿಲ್ಲ ಎಂದು ಟೀಕಿಸಿರುವ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಹೇಳಿದಂತೆ ವಿಡಿಯೊವನ್ನು ತಿರುಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT