ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಹಕ್ಕು ಚಲಾಯಿಸಿ: ಮಹಾರಾಷ್ಟ್ರ ಜನರಿಗೆ ಶಾರುಕ್‌ ಖಾನ್ ಮನವಿ

Published 19 ಮೇ 2024, 9:20 IST
Last Updated 19 ಮೇ 2024, 9:20 IST
ಅಕ್ಷರ ಗಾತ್ರ

ಮುಂಬೈ: ‘ಮತದಾನದ ಹಕ್ಕನ್ನು ಚಲಾಯಿಸಿ’ ಎಂದು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್‌ ಖಾನ್‌ ಅವರು ಜನರನ್ನು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಾಳೆ ನಡೆಯಲಿದೆ. ಮುಂಬೈನ ಆರು ಕ್ಷೇತ್ರ ಮತ್ತು ಮಹಾರಾಷ್ಟ್ರದ ಉಳಿದ 7 ಕ್ಷೇತ್ರಗಳ ಜನರು ನಾಳೆ (ಮೇ.20) ಮತ ಚಲಾಯಿಸಲಿದ್ದಾರೆ.

ಮತದಾನದ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶಾರುಕ್‌, 'ಜವಾಬ್ದಾರಿಯುತ ಭಾರತೀಯ ಪ್ರಜೆಗಳಾದ ನಾವು ಈ ಸೋಮವಾರ ಮಹಾರಾಷ್ಟ್ರದಲ್ಲಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಭಾರತೀಯರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಮತ್ತು ನಮ್ಮ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸೋಣ. ಮತದಾನ ಮಾಡುವುದು ನಮ್ಮ ಹಕ್ಕು’ ಎಂದು ಬರೆದುಕೊಂಡಿದ್ದಾರೆ.

ನಿನ್ನೆ (ಶುಕ್ರವಾರ) ಸಲ್ಮಾನ್‌ ಖಾನ್‌ ಕೂಡ ಮತದಾನ ಮಾಡುವ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT