ಹರಿದ್ವಾರ: ಲೋಕಸಭಾ ಚುನಾವಣೆಯ ವೇಳೆ ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಸೇವಾ ದಳದ ಮುಖ್ಯಸ್ಥ ರಾಜೇಶ್ ರಸ್ತೋಗಿ ಪಕ್ಷದ ಎಲ್ಲ ಹುದ್ದೆಗಳಿಗೂ ಮಂಗಳವಾರ ರಾಜೀನಾಮೆ ನೀಡಿದ್ದು, ‘ಕೌಟುಂಬಿಕ ರಾಜಕಾರಣವು ಪಕ್ಷವನ್ನು ಮುಗಿಸುತ್ತಿದೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ವಕೀಲರು ಮತ್ತು ಪಕ್ಷದ ಜನಪ್ರಿಯ ನಾಯಕರಾದ ರಸ್ತೋಗಿ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ತಮ್ಮ ಮಗನಿಗೆ ಹರಿದ್ವಾರ ಲೋಕಸಭಾ ಕ್ಷೇತ್ರದ ಟಿಕೆಟ್ ‘ತಂದುಕೊಟ್ಟಿದ್ದಾರೆ’ ಎಂದು ಟೀಕಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಿಸಿಸಿ ಅಧ್ಯಕ್ಷ ಕರಣ್ ಮಹರಾ ಮತ್ತು ಪಕ್ಷದ ಉತ್ತರಾಖಂಡ ಉಸ್ತುವಾರಿ ಕುಮಾರಿ ಶೆಲ್ಜಾ ಅವರಿಗೆ ರಾಜೀನಾಮೆ ಪತ್ರ ಕಳಿಸಿರುವ ರಸ್ತೋಗಿ, ‘ಉತ್ತರಾಖಂಡ ಕಾಂಗ್ರೆಸ್ ಮುಖಂಡರು ಗುಂಪುಗಾರಿಕೆಯಲ್ಲಿ ತೊಡಗಿದ್ದು, ಟಿಕಟ್ ಮಾರಾಟದಲ್ಲಿ ನಿರತರಾಗಿದ್ದಾರೆ. ಇವನ್ನು ಹತೋಟಿಗೆ ತರದಿದ್ದರೆ ಪಕ್ಷವು ವಿರೋಧ ಪಕ್ಷವಾಗಿಯೂ ಉಳಿಯುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.