ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೇಠಿಯಲ್ಲಿ ಗೆಲುವು ನಿರೀಕ್ಷಿಸಿದ್ದೆ: ಕಿಶೋರಿಲಾಲ್‌ಗೆ ಪ್ರಿಯಾಂಕಾ ಅಭಿನಂದನೆ

Published 4 ಜೂನ್ 2024, 12:48 IST
Last Updated 4 ಜೂನ್ 2024, 12:48 IST
ಅಕ್ಷರ ಗಾತ್ರ

ನವದೆಹಲಿ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಗೆಲುವು ದಾಖಲಿಸುವತ್ತ ದಾಪುಗಾಲಿಟ್ಟ ಕಾಂಗ್ರೆಸ್‌ ಅಭ್ಯರ್ಥಿ ಕಿಶೋರಿಲಾಲ್ ಶರ್ಮಾ ಅವರನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಅಭಿನಂದಿಸಿದ್ದಾರೆ.

‘ಎಕ್ಸ್‘ ಖಾತೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಈ ಕುರಿತು ಪೋಸ್ಟ್ ಮಾಡಿದ್ದು, 'ನೀವು ಗೆಲ್ಲುತ್ತೀರಿ ಎಂದು ನನಗೆ ಮೊದಲಿನಿಂದಲೂ ನಂಬಿಕೆಯಿತ್ತು. ನಿಮಗೂ ಹಾಗೂ ಅಮೇಠಿಯ ಸಹೋದರ, ಸಹೋದರಿಯರೆಲ್ಲರಿಗೂ ಅಭಿನಂದನೆಗಳು‘ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚುನಾವಣಾ ಆಯೋಗವು ಮಧ್ಯಾಹ್ನ 2.20ರ ವೇಳೆಗೆ ನೀಡಿರುವ ಮಾಹಿತಿಯ ಅನುಸಾರ, ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಿಶೋರಿಲಾಲ್ ಶರ್ಮಾ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗಿಂತ 90,000 ಮತಗಳ ಅಂತರದಲ್ಲಿ ಮುಂದಿದ್ದರು.

ಪ್ರಿಯಾಂಕಾ ಗಾಂಧಿ ಅವರು ಕುಟುಂಬದ ಭದ್ರಕೋಟೆ ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಅನುಕ್ರಮವಾಗಿ ಶರ್ಮಾ ಹಾಗೂ ಸಹೋದರ ರಾಹುಲ್‌ ಗಾಂಧಿ ಪರವಾಗಿ ಸುಮಾರು ಎರಡು ವಾರ ಚುನಾವಣಾ ಪ್ರಚಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT