ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ 9 ಮುಸ್ಲಿಂ ಶಾಸಕರು ಆಯ್ಕೆ: ಎಲ್ಲರೂ ಕಾಂಗ್ರೆಸಿಗರೇ

Published 14 ಮೇ 2023, 16:08 IST
Last Updated 14 ಮೇ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಕಾಂಗ್ರೆಸ್‌ನಿಂದ ಒಂಬತ್ತು ಮಂದಿ ಮುಸ್ಲಿಂ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

2018ರಲ್ಲಿ ಕಾಂಗ್ರೆಸ್‌ನಿಂದ ಏಳು ಮಂದಿ ಮುಸ್ಲಿಮರು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರ ಸಂಖ್ಯೆ 9ಕ್ಕೇರಿದೆ.

ರಾಜ್ಯದ ಒಟ್ಟು ಮತದಾರರಲ್ಲಿ ಶೇ 13 ರಷ್ಟು ಮುಸ್ಲಿಂ ಮತದಾರರು ಇದ್ದಾರೆ. ಈ ಬಾರಿ ಶೇ 88 ರಷ್ಟು ಮತಗಳು ಕಾಂಗ್ರೆಸ್‌ ಪರವಾಗಿ ಚಲಾವಣೆಯಾಗಿದೆ. ಬಿಜೆಪಿ ಸರ್ಕಾರ ಕಿತ್ತುಕೊಂಡಿದ್ದ ಶೇ 4 ಮೀಸಲಾತಿ ಮರುಸ್ಥಾಪನೆ ಭರವಸೆ ಹಾಗೂ ಬಜರಂಗದಳ ನಿಷೇಧ ಮುಂತಾದ ವಿಚಾರಗಳು ಮುಸ್ಲಿಮರ ವೋಟು ಹೆಚ್ಚಾಗಿ ಕಾಂಗ್ರೆಸ್‌ಗೆ ಸಿಗುವಂತೆ ಮಾಡಿದೆ.

ಇದರ ಜತೆಗೆ ಹಿಜಾಬ್, ಹಲಾಲ್, ಅಜಾನ್ ವಿವಾದದಿಂದ ಬೇಸತ್ತಿದ್ದ ಮುಸ್ಲಿಮರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.

ಕಾಂಗ್ರೆಸ್‌ ಸುಮಾರು 15 ಮಂದಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್‌ ನೀಡಿತ್ತು. ಇದರಲ್ಲಿ 9 ಮಂದಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ 23 ಮಂದಿ ಸ್ಪರ್ಧೆ ಮಾಡಿದ್ದರೂ, ಯಾರೊಬ್ಬರೂ ಆಯ್ಕೆಯಾಗಿಲ್ಲ. ಬಿಜೆಪಿ ಮುಸಲ್ಮಾನರಿಗೆ ಟಿಕೆಟ್‌ ನೀಡಿರಲಿಲ್ಲ.

ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಐಎಂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಶೇ 0.02 ರಷ್ಟು ಮತಗಳನ್ನು ಗಳಿಸಿದೆ. ಎಸ್‌ಡಿಪಿಐನಿಂದ 16 ಮಂದಿ ಸ್ಪರ್ಧಿಸಿದ್ದರೂ, ಖಾತೆ ತೆರೆಯಲು ವಿಫಲವಾಗಿದೆ.

;

ಕಲಬುರಗಿ ಉತ್ತರ ಕ್ಷೇತ್ರದ ಹಾಲಿ ಶಾಸಕಿ ಖನೀಜ್ ಫಾತಿಮ ಅವರು ವಿಧಾನಸಭೆ ಪ್ರವೇಶಿಸಿದ ಏಕೈಕ ಮುಸ್ಲಿಂ ಮಹಿಳೆಯಾಗಿದ್ದಾರೆ.

ಆಸೀಫ್‌ (ರಾಜು) ಸೇಠ್ ಹಾಗೂ ಇಕ್ಬಾಲ್ ಹುಸೇನ್‌ ಹೊರತುಪಡಿಸಿ ಉಳಿದವರೆಲ್ಲರೂ ಈಗಾಗಲೇ ವಿಧಾನಸಭೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT