ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJPಗೆ ಬೈಯುತ್ತಿದ್ದರೆ ಈಶ್ವರಪ್ಪಗೆ ಬೂತ್ ಏಜೆಂಟ್ ಕೂಡ ಸಿಗೊಲ್ಲ: ಆರಗ ಜ್ಞಾನೇಂದ್ರ

Published 18 ಏಪ್ರಿಲ್ 2024, 7:50 IST
Last Updated 18 ಏಪ್ರಿಲ್ 2024, 7:50 IST
ಅಕ್ಷರ ಗಾತ್ರ

ಶಿವಮೊಗ್ಗ: 'ಕೆ.ಎಸ್.ಈಶ್ವರಪ್ಪ ಅವರು ಹೀಗೆಯೇ ಬಿಜೆಪಿಗೆ ಬೈಯುತ್ತಿದ್ದರೆ ಅವರಿಗೆ ಮತ ಬರುವುದು ಇರಲಿ, ಚುನಾವಣೆ ವೇಳೆ ಚೀಟಿ ಹಿಡಿಯಲು‌ ಒಬ್ಬ ಬೂತ್ ಏಜೆಂಟ್ ಕೂಡ ಸಿಗುವುದಿಲ್ಲ' ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಶ್ವರಪ್ಪ ತಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಂಸದ ರಾಘವೇಂದ್ರ ಅವರನ್ನು ಸೋಲಿಸಲು ಅವರಿಗೆ ಆಗೊಲ್ಲ. ರಾಘವೇಂದ್ರ ಮತ್ತೊಮ್ಮೆ ಗೆದ್ದು ಸಂಸತ್ ಪ್ರವೇಶ ಮಾಡಲಿದ್ದಾರೆ. ಅಷ್ಟಕ್ಕೂ ಈಶ್ವರಪ್ಪ ತಮ್ಮ ಸಾಧನೆ ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಬೆಂಗಳೂರಿನಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿರುವುದು ತಲೆ ತಗ್ಗಿಸುವ ವಿಚಾರ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಪರ ಘೋಷಣೆ ಕೂಗಿದರು. ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟರು. ಈಗ ಶ್ರೀರಾಮ ಭಕ್ತರ ಮೇಲೆ ಹಲ್ಲೆ ಮಾಡಿ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಮನೆಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಮತ ಕೇಳಲು ಹೋಗಿರುವುದನ್ನು ಸಮರ್ಥಿಸಿದ ಆರಗ ಜ್ಞಾನೇಂದ್ರ, 'ಅದು ಸರಿ ಇದೆ. ಆರ್‌.ಡಿ. ಪಾಟೀಲ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮನುಷ್ಯ. ಅಧಿಕಾರದಲ್ಲಿ ಇದ್ದಾಗ ನಾವೇ ಆತನನ್ನು ಬಂಧಿಸಿದ್ದೆವು' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT