ಬೆಂಗಳೂರು: ನಗರದ ಮೂವರು ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿನ (ಎಂ.ಪಿ. ಲ್ಯಾಡ್ಸ್) ₹55.88 ಕೋಟಿ ಉಪಯೋಗಿಸಿಕೊಂಡಿದ್ದು, ಅದರಲ್ಲಿ ಶೇ 42.67ರಷ್ಟು ಅನುದಾನವನ್ನು ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿದ್ದಾರೆ.

ಬೆಂಗಳೂರಿನ ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ 2019ರಿಂದ 2024ರವರೆಗಿನ ಅನುದಾನ ಬಳಕೆ ವಿವರಗಳನ್ನು ಪರಿಶೀಲಿಸಿ ‘ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ (ಬಿ–ಪ್ಯಾಕ್) ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶಗಳಿವೆ.

ಅನುದಾನದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಖರ್ಚು ಮಾಡಲಾಗಿದೆ. ನಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಸಂಸದರೊಬ್ಬರಿಗೆ ಪ್ರತಿವರ್ಷ ಎಂ.ಪಿ.ಲ್ಯಾಡ್ಸ್‌ಯಡಿ ₹ 5 ಕೋಟಿ ಅನುದಾನ ಲಭ್ಯವಾಗುತ್ತದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ₹19.36 ಕೋಟಿ ಅನುದಾನ ಬಳಸಿಕೊಂಡಿದ್ದರೆ, ಕೇಂದ್ರ ಕ್ಷೇತ್ರದ ಪಿ.ಸಿ. ಮೋಹನ್ ₹18.69 ಹಾಗೂ ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರು ₹17.97 ಕೋಟಿ ಅನುದಾನ ಉಪಯೋಗಿಸಿದ್ದಾರೆ.

‘ಈ ವರದಿ ಮೂಲಕ ಸಂಸದರು ಐದು ವರ್ಷಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸುವ ಪ್ರಯತ್ನ ಇದಾಗಿದೆ’ ಎಂದು ಬಿ.ಪ್ಯಾಕ್ ಟ್ರಸ್ಟಿ ರೇವತಿ ಅಶೋಕ್ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಎ.ಪಿ.ಲ್ಯಾಡ್ಸ್ ಅನ್ನು 2020ರ ಏಪ್ರಿಲ್ 6ರಿಂದ 2021ರ ನವೆಂಬರ್ 9ರವರೆಗೆ ಅಮಾನತುಗೊಳಿಸಲಾಗಿತ್ತು. 2020–21ನೇ ಆರ್ಥಿಕ ಸಾಲಿನಲ್ಲಿ ಈ ಯೋಜನೆಯ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. 2021–22ರ ಆರ್ಥಿಕ ವರ್ಷದಲ್ಲಿ 2021ರ ನವೆಂಬರ್ 10ರಿಂದ 2022ರ ಮಾರ್ಚ್ 31ರವರೆಗೆ ಪ್ರತಿ ಸಂಸದರಿಗೆ ₹2 ಕೋಟಿ ಹಣ ಬಿಡುಗಡೆ ಆಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.