ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವನ ನೆರಿಳಿನಲ್ಲಿ ಅಳಿಯ ಸ್ಪರ್ಧೆ

ಕಾಂಗ್ರೆಸ್‌ನ ಭದ್ರಕೋಟೆಯ ಮರು ವಶಕ್ಕೆ ಖರ್ಗೆ ಕುಟುಂಬಸ್ಥರಿಗೆ ಮಣೆ
Published 22 ಮಾರ್ಚ್ 2024, 6:12 IST
Last Updated 22 ಮಾರ್ಚ್ 2024, 6:12 IST
ಅಕ್ಷರ ಗಾತ್ರ

ಕಲಬರಗಿ: ಸ್ಥಳೀಯ ನಾಯಕರ ಒತ್ತಾಸೆಯಂತೆ ಕಲಬುರಗಿ ಲೋಕಸಭಾ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅಂತಿಮಗೊಳಿಸಿ ಕಾಂಗ್ರೆಸ್ ಗುರುವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಬಿಜೆಪಿಯು ಹಾಲಿ ಸಂಸದ ಡಾ. ಉಮೇಶ ಜಾಧವ ಅವರನ್ನು ಅಖಾಡಕ್ಕೆ ಇಳಿಸಿದ್ದು, ಕಾಂಗ್ರೆಸ್‌ನ ರಾಧಾಕೃಷ್ಣ ಜೊತೆ ನೇರ ಪೈಪೋಟಿ ನಡೆಯಲಿದೆ.

ಖರ್ಗೆ ಪತ್ನಿ ರಾಧಾಬಾಯಿ ಅವರ ತಮ್ಮ ರಾಧಾಕೃಷ್ಣ ದೊಡ್ಡಮನಿ ಅವರು ಖರ್ಗೆ ಪುತ್ರಿ ಡಾ. ಜಯಶ್ರೀ ಅವರನ್ನು ಮದುವೆಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಗುರಮಿಠಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಖರ್ಗೆ ಅವರು 1972ರಿಂದ 2004ರವರೆಗೆ ಸತತವಾಗಿ ಪ್ರತಿನಿಧಿಸಿ, ಗೆಲುವಿನಲ್ಲಿ ರಾಧಾಕೃಷ್ಣ ಅವರ ಪಾತ್ರ ಹಿರಿದಾಗಿದೆ. ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಗೆದ್ದು, ಕೇಂದ್ರ ಕಾರ್ಮಿಕ ಮಂತ್ರಿಯಾಗುವಲ್ಲಿ ರಾಧಾಕೃಷ್ಣ ಅವರ ಪಾತ್ರ ಮರೆಯುವಂತಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರು ತಮ್ಮ ಒಂದು ಕಾಲದ ಶಿಷ್ಯ ಡಾ. ಉಮೇಶ್ ಜಾಧವ್ ಎದುರು ಸೋತು, ಸತತ ಗೆಲುವಿನ ಕೊಂಡಿ ಕಳಚಿಕೊಂಡರು. 371 (ಜೆ) ವಿಶೇಷ ಸ್ಥಾನಮಾನ ತಂದುಕೊಟ್ಟರೂ ತಮಗೆ ಸೋಲಾಗಿದ್ದರ ಕಹಿ ನೆನಪನ್ನು ಖರ್ಗೆ ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಎಐಸಿಸಿ ಅಧ್ಯಕ್ಷ ಸ್ಥಾನ, ‘ಇಂಡಿಯಾ’ ಒಕ್ಕೂಟ ಕಟ್ಟಿಕೊಂಡು ಪ್ರಧಾನಿ ಮೋದಿ ಅವರಂಥ ನಾಯಕರನ್ನು ಹೆದರಿಸುವಂತಹ ಹೊಣೆಗಾರಿಕೆ ಹೆಚ್ಚಾಗಿ ಇರಿವುದರಿಂದ ಚುನಾವಣೆ ಸ್ಪರ್ಧೆಗೆ ಆಸಕ್ತಿ ವಹಿಸಲಿಲ್ಲ.

ಕಳೆದ ಚುನಾವಣೆಯಲ್ಲಿ ಖರ್ಗೆ ಅವರು ಜಾಧವ ವಿರುದ್ಧ 95,452 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈಗ ಅದೇ ಅಭ್ಯರ್ಥಿಯ ವಿರುದ್ಧ ಖರ್ಗೆ ಅಳಿಯ ಕಣಕ್ಕೆ ಇಳಿದಿದ್ದಾರೆ. 19 ಚುನಾವಣೆಗಳ ಪೈಕಿ 16 ಬಾರಿ ಕಾಂಗ್ರೆಸ್ ಗೆದ್ದ ದಾಖಲೆ ಇರುವ ‘ಕೈ’ ಪಾಳೆಯದ ಭದ್ರ ಕೋಟೆಯನ್ನು ಮತ್ತೆ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಜೂನ್‌ 4ರಂದು ಗೊತ್ತಾಗಲಿದೆ.

ಎದುರಾಳಿ ಇಲ್ಲದೆ ತುರುಸಿನಿಂದ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ‘ಕೈ’ ಪಡೆಯೂ ಚುನಾವಣೆಯ ಅಖಾಡಕ್ಕೆ ಇಳಿಯಲಿದೆ. ಬಿಜೆಪಿಯ ನಾಯಕರು ಈಗಾಗಲೇ ಖರ್ಗೆ ಮನೆತನದ ಕುಟುಂಬ ರಾಜಕಾರಣವನ್ನು ಪ್ರಸ್ತಾಪಿಸಿ ಮತ ಭೇಟಿ ಶುರುಮಾಡಿದ್ದಾರೆ. ಇದನ್ನು ‘ಕೈ’ ನಾಯಕರು ಯಾವ ರೀತಿ ಸಮರ್ಥಿಸಿಕೊಂಡು, ‘ಕಮಲ’ಕ್ಕೆ ತಿರುಗೇಟು ನೀಡುತ್ತಾರೆ ಕಾಯಬೇಕಿದೆ.

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT