ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ‘ಉದ್ಯೋಗ’ ಖಾತ್ರಿ ಬೇಡಿಕೆ; ಚುನಾವಣಾ ಪ್ರಚಾರದತ್ತ ಕಾರ್ಮಿಕರು

ಚುನಾವಣಾ ಪ್ರಚಾರಕ್ಕೆ ಧುಮುಕಿದ ಕೃಷಿ, ಕೂಲಿ ಕಾರ್ಮಿಕರು
Published 30 ಮಾರ್ಚ್ 2024, 23:23 IST
Last Updated 30 ಮಾರ್ಚ್ 2024, 23:23 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೆಲಸಕ್ಕಾಗಿ ಸಲ್ಲಿಕೆಯಾಗುವ ಕಾರ್ಮಿಕರ ಬೇಡಿಕೆ ಶೇಕಡ 85ರಷ್ಟು ಕುಸಿದಿದೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ದಿನಾಂಕ ಘೋಷಣೆಯಾಗುತ್ತಿದಂತೆ ಗ್ರಾಮೀಣ ಪ್ರದೇಶದ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಜತೆ ಕೃಷಿ, ಕೂಲಿ ಕಾರ್ಮಿಕರೂ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳಿವೆ. ಪ್ರತಿ ಪಂಚಾಯತಿಗಳಲ್ಲೂ ಉದ್ಯೋಗ ಖಾತ್ರಿ ಅಡಿ ಕೆಲಸಕ್ಕೆ ಬೇಡಿಕೆ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಶೇ 60ಕ್ಕೂ ಹೆಚ್ಚು ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.

‘ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯನ್ನು ₹316ರಿಂದ ₹349ಕ್ಕೆ ಹೆಚ್ಚಿಸಿದ್ದೇವೆ. ಕೆಲಸಕ್ಕೆ ಬನ್ನಿ ಎಂದು ಪಂಚಾಯಿತಿ ಸದಸ್ಯರು ನಿತ್ಯವೂ ಕರೆಯುತ್ತಿದ್ದಾರೆ. ಆದರೆ, ಕೂಲಿ ಸಕಾಲಕ್ಕೆ ಖಾತೆಗಳಿಗೆ ಜಮೆಯಾಗುತ್ತಿಲ್ಲ. ಅದೇ ಚುನಾವಣಾ ಪ್ರಚಾರಗಳಿಗೆ, ಪಕ್ಷಗಳ ರ್‍ಯಾಲಿಗಳಿಗೆ ಹೋದರೆ ಖಾತ್ರಿಗಿಂತ ಎರಡು ಪಟ್ಟು ಹೆಚ್ಚು ಕೂಲಿ ಸಿಗುತ್ತದೆ. ಅಂದಿನ ಹಣ ಅಂದೇ ಕೊಡುತ್ತಾರೆ. ಊಟ, ಉಪಾಹಾರವೂ ಉಚಿತ. ನಿತ್ಯವೂ ಊರೂರು ತಿರುಗುತ್ತೇವೆ. ಇನ್ನು ಒಂದು ತಿಂಗಳು ಯಾವ ಕೆಲಸಕ್ಕೂ ಹೋಗುವುದಿಲ್ಲ’ ಎನ್ನುತ್ತಾರೆ ತಣಿಗೆರೆಯ ಕಾರ್ಮಿಕ ಅಂಜನಪ್ಪ. 

ಕೂಲಿ ವಿಳಂಬ, ಕಾರ್ಮಿಕರು ವಿಮುಖ:

‘ನಿಯಮಿತವಾಗಿ ಹಣ ಬಿಡುಗಡೆ ಮಾಡದ ಕಾರಣ ಸಮಯಕ್ಕೆ ಸರಿಯಾಗಿ ಕೂಲಿ ಹಣ ಸಿಗದೇ ಕಾರ್ಮಿಕರು ಬೇಸರಗೊಂಡಿದ್ದರು. ನಿಯಮದಂತೆ 15 ದಿನಗಳಿಗೆ ಒಮ್ಮೆ ಕೂಲಿ ಹಣ ಜಮೆ ಮಾಡಬೇಕು. ಕಳೆದ ಡಿಸೆಂಬರ್‌ ಮೂರನೇ ವಾರ ಜಮೆ ಮಾಡಿದ್ದು ಬಿಟ್ಟರೆ ಮೂರು ತಿಂಗಳು ಹಣ ಬಂದಿರಲಿಲ್ಲ. ಇದೇ ಮಾರ್ಚ್‌ 21ರಂದು ಬಂದಿದೆ. ಪಂಚಾಯತಿ ವ್ಯಾಪ್ತಿಯಲ್ಲಿ 2,967 ಜಾಬ್‌ಕಾರ್ಡ್‌ ಪಡೆದ ಕಾರ್ಮಿಕರಿದ್ದು, ಬಾಕಿ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವೊಲಿಸುತ್ತಿದ್ದೇವೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾರಣ ಯಾರೂ ಬರುತ್ತಿಲ್ಲ. ಕೆಲಸ ಸ್ಥಗಿತಗೊಳಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯದಲ್ಲಿ 2023–24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ 13.81 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ (ಎಂಟು ಗಂಟೆಗಳ ಒಂದು ಕೆಲಸವನ್ನು ಒಂದು ಮಾನವ ದಿನ ಎಂದು ಪರಿಗಣಿಸಲಾಗುತ್ತದೆ. 100 ಮಂದಿ ಒಂದೇ ದಿನದಲ್ಲಿ ಎಂಟು ತಾಸು ಕೆಲಸ ಮಾಡಿದರೆ, ಅದನ್ನು 100 ಮಾನವ ದಿನಗಳು ಎಂದು ಪರಿಗಣಿಸಲಾಗುತ್ತದೆ). ರಾಜ್ಯದಲ್ಲಿ ಕೆಲಸ ನಿರ್ವಹಿಸಿರುವ ಕಾರ್ಮಿಕರಿಗೆ ನೀಡಬೇಕಿರುವ ಕೂಲಿ ₹475.59 ಕೋಟಿ ಬಾಕಿ ಇದ್ದು, ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.  

ಆದರೆ, ಕೂಲಿ ಸಕಾಲಕ್ಕೆ ಖಾತೆಗಳಿಗೆ ಜಮೆಯಾಗುತ್ತಿಲ್ಲ. ಅದೇ ಚುನಾವಣಾ ಪ್ರಚಾರಗಳಿಗೆ, ಪಕ್ಷಗಳ ರ್‍ಯಾಲಿಗಳಿಗೆ ಹೋದರೆ ಖಾತ್ರಿಗಿಂತ ಎರಡು ಪಟ್ಟು ಹೆಚ್ಚು ಕೂಲಿ ಸಿಗುತ್ತದೆ. ಅಂದಿನ ಹಣ ಅಂದೇ ಕೊಡುತ್ತಾರೆ. ಊಟ, ಉಪಾಹಾರವೂ ಉಚಿತ. ನಿತ್ಯವೂ ಊರೂರು ತಿರುಗುತ್ತೇವೆ. ಇನ್ನು ಒಂದು ತಿಂಗಳು ಯಾವ ಕೆಲಸಕ್ಕೂ ಹೋಗುವುದಿಲ್ಲ’ ಎನ್ನುತ್ತಾರೆ ತಣಿಗೆರೆಯ ಕಾರ್ಮಿಕ ಅಂಜನಪ್ಪ. 

ಕೂಲಿ ವಿಳಂಬ, ಕಾರ್ಮಿಕರು ವಿಮುಖ: ‘ನಿಯಮಿತವಾಗಿ ಹಣ ಬಿಡುಗಡೆ ಮಾಡದ ಕಾರಣ ಸಮಯಕ್ಕೆ ಸರಿಯಾಗಿ ಕೂಲಿ ಹಣ ಸಿಗದೇ ಕಾರ್ಮಿಕರು ಬೇಸರಗೊಂಡಿದ್ದರು. ನಿಯಮದಂತೆ 15 ದಿನಗಳಿಗೆ ಒಮ್ಮೆ ಕೂಲಿ ಹಣ ಜಮೆ ಮಾಡಬೇಕು. ಕಳೆದ ಡಿಸೆಂಬರ್‌ ಮೂರನೇ ವಾರ ಜಮೆ ಮಾಡಿದ್ದು ಬಿಟ್ಟರೆ ಮೂರು ತಿಂಗಳು ಹಣ ಬಂದಿರಲಿಲ್ಲ. ಇದೇ ಮಾರ್ಚ್‌ 21ರಂದು ಬಂದಿದೆ. ಪಂಚಾಯತಿ ವ್ಯಾಪ್ತಿಯಲ್ಲಿ 2,967 ಜಾಬ್‌ಕಾರ್ಡ್‌ ಪಡೆದ ಕಾರ್ಮಿಕರಿದ್ದು, ಬಾಕಿ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವೊಲಿಸುತ್ತಿದ್ದೇವೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾರಣ ಯಾರೂ ಬರುತ್ತಿಲ್ಲ. ಕೆಲಸ ಸ್ಥಗಿತಗೊಳಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯದಲ್ಲಿ 2023–24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ 13.81 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ (ಎಂಟು ಗಂಟೆಗಳ ಒಂದು ಕೆಲಸವನ್ನು ಒಂದು ಮಾನವ ದಿನ ಎಂದು ಪರಿಗಣಿಸಲಾಗುತ್ತದೆ. 100 ಮಂದಿ ಒಂದೇ ದಿನದಲ್ಲಿ ಎಂಟು ತಾಸು ಕೆಲಸ ಮಾಡಿದರೆ, ಅದನ್ನು 100 ಮಾನವ ದಿನಗಳು ಎಂದು ಪರಿಗಣಿಸ ಲಾಗುತ್ತದೆ). ರಾಜ್ಯದಲ್ಲಿ ಕೆಲಸ ನಿರ್ವಹಿಸಿರುವ ಕಾರ್ಮಿಕರಿಗೆ ನೀಡಬೇಕಿರುವ ಕೂಲಿ ₹475.59 ಕೋಟಿ ಬಾಕಿ ಇದ್ದು, ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.

ಕಟ್ಟಡ ಕಾಮಗಾರಿಗಳಿಗೂ ವಿಘ್ನ

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ, ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆಯಾದರೆ, ನಗರ–ಪಟ್ಟಣ ಪ್ರದೇಶಗಳಲ್ಲಿ ಕಟ್ಟಡ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೂ ಕಾರ್ಮಿಕರ ಕೊರತೆ ಎದುರಾಗಿದೆ.

ನಿರ್ಮಾಣ ಕ್ಷೇತ್ರ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆದವರು, ಕಾರ್ಮಿಕರ ಕೊರತೆ ನೀಗಿಸಲು ಪರದಾಡುವಂತಾಗಿದೆ. ತುರ್ತಾಗಿ ಪೂರ್ಣಗೊಳಿಸುವ ಕಾಮಗಾರಿಗಳಿಗೆ ಲಭ್ಯವಿರುವ ಕಾರ್ಮಿಕರನ್ನು ನಿಯೋಜಿಸಿ, ಗೃಹ ಮತ್ತಿತರ ನಿರ್ಮಾಣ ಕಾಮಗಾರಿಗಳ ಕೆಲಸವನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದಾರೆ. 

ವೈಯಕ್ತಿಕ ಕಾಮಗಾರಿಗಳಿಗೆ ತಡೆ

ನರೇಗಾ ಯೋಜನೆಯ ಕೆಲವು ಕೆಲಸಗಳಿಗೆ ಚುನಾವಣಾ ನೀತಿ ಸಂಹಿತೆಯೂ ಅಡ್ಡಿಯಾಗಿದೆ.  ಅರ್ಹ ಕುಟುಂಬಗಳು ಗರಿಷ್ಠ ₹5 ಲಕ್ಷ ಮೊತ್ತದ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

ತೋಟಗಳ ನಿರ್ಮಾಣ, ಕುರಿ, ದನದ ಕೊಟ್ಟಿಗೆ, ಕೃಷಿ ಹೊಂಡಗಳನ್ನು ನಿರ್ಮಾಣ  ಮಾಡಿಕೊಳ್ಳಬಹುದು. ಇಂತಹ ಕೆಲಸಗಳಿಗೆ ಬರುವ ಕಾರ್ಮಿಕರಿಗೂ ಉದ್ಯೋಗ ಖಾತ್ರಿಯ ಕೂಲಿ ನೀಡಲಾಗುತ್ತದೆ. ನೀತಿ ಸಂಹಿತೆ ಮುಗಿಯುವರೆಗೂ ಪಂಚಾಯತಿಗಳು ಯಾವುದೇ ವೈಯಕ್ತಿಕ ಯೋಜನೆಗಳಿಗೆ ಅನುಮೋದನೆ ನೀಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT