ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ: ಸಚಿವ ಕೆ.ಎನ್‌. ರಾಜಣ್ಣ

Published 22 ಮಾರ್ಚ್ 2024, 13:58 IST
Last Updated 22 ಮಾರ್ಚ್ 2024, 13:58 IST
ಅಕ್ಷರ ಗಾತ್ರ

ಹಾಸನ: ‘2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಎಚ್‌.ಡಿ. ದೇವೇಗೌಡರು ಸೋಲಲು ನಾನು ಕಾರಣನಲ್ಲ. ಆಗ ಸಂಸದರಾಗಿದ್ದ, ಒಕ್ಕಲಿಗ ಸಮುದಾಯದ ಮುದ್ದಹನುಮೇಗೌಡರ ಟಿಕೆಟ್‌ ಕಸಿದುಕೊಂಡು ದೇವೇಗೌಡರು ಸ್ಪರ್ಧಿಸಿದ್ದರು. ಇದು ತುಮಕೂರು ಜಿಲ್ಲೆಯ ಜನರಿಗೆ ಸಹಿಸಲು ಆಗಲಿಲ್ಲ. ಅದಕ್ಕಾಗಿಯೇ ಸೋಲಿಸಿದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ, ಪಂಗಡಗಳ ಮುಖಂಡರ ಜೊತೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ‘ಈ ಹಿಂದೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪುಟ್ಟಸ್ವಾಮಿಗೌಡರು, ದೇವೇಗೌಡರನ್ನು ಹೇಗೆ ಸೋಲಿಸಿದರೋ, ಅದೇ ರೀತಿ ಈ ಬಾರಿ ಪ್ರಜ್ವಲ್‌ ಅವರನ್ನು ಸೋಲಿಸಿ, ಶ್ರೇಯಸ್‌ ಪಟೇಲ್‌ ಗೆಲ್ಲಿಸಬೇಕು’ ಎಂದರು.

‘ನಮ್ಮ ಬಿಜೆಪಿ ಸಂಸದರು ಸಂಸತ್ತಿನ ಒಳಗೆ ಹಾಗೂ ಹೊರಗೆ ರಾಜ್ಯದ ಹಿತಾಸಕ್ತಿಯ ಬಗ್ಗೆ ಮಾತನಾಡಲಿಲ್ಲ. ಅಂತಹ ನಪುಂಸಕರನ್ನು ನಾವು ಕಳುಹಿಸಿದ್ದೇವೆ. ನಮಗೆ ಅವಮಾನವಾಗುತ್ತದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT