ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲೆಯಲ್ಲಿ ಬೆಟ್ಟಿಂಗ್‌ ಹಣದ ಜೊತೆ ಮೇಕೆ, ಫಸಲನ್ನೇ ಇಟ್ಟರು!

Published 11 ಮೇ 2023, 19:41 IST
Last Updated 11 ಮೇ 2023, 19:41 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ವಿವಿಧೆಡೆ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ಹೆಚ್ಚಿನ ಬೆಟ್ಟಿಂಗ್‌ ನಡೆದಿದೆ. 

ಉಳಿದಂತೆ ತಿ.ನರಸೀಪುರ, ಕೆ.ಆರ್‌.ನಗರದಲ್ಲಿ ಹಣ, ಬೈಕ್, ಮೇಕೆಯನ್ನೇ ಬೆಟ್ಟಿಂಗ್‌ಗೆ ಕಟ್ಟುತ್ತಿದ್ದಾರೆ. ಕೆ.ಆರ್‌.ನಗರದ ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌ ಪರ //ಅಭ್ಯರ್ಥಿಯೊಬ್ಬರು// ₹5 ಲಕ್ಷದವರೆಗೂ ಬೆಟ್ಟಿಂಗ್‌ ಮಾಡಿದ್ದು, ಪ‍್ರತಿಸ್ಪರ್ಧಿಗಳು ಅಷ್ಟೇ ಮೊತ್ತ ನೀಡಲು ಹಿಂದೇಟು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಡಿಯೊ ಹರಿದಾಡುತ್ತಿದೆ.

ತಿ.ನರಸೀಪುರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳ ಪರ ದೊಡ್ಡ ಮೊತ್ತದ ಬೆಟ್ಟಿಂಗ್‌ ನಡೆದಿದೆ. ತಲಕಾಡು ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಮೇಕೆ, ಬೈಕ್‌ನ ಜೊತೆ ಮೆಕ್ಕೆಜೋಳದ ಫಸಲನ್ನೇ ಬೆಟ್ಟಿಂಗ್‌ಗೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT