ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಪ್ರಧಾನಿ ಮೋದಿ ರೋಡ್ ಶೋ ಸಮಯ ಬದಲಾವಣೆ: ವಿ. ಸುನಿಲ್ ಕುಮಾರ್

Published 13 ಏಪ್ರಿಲ್ 2024, 6:41 IST
Last Updated 13 ಏಪ್ರಿಲ್ 2024, 6:41 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಮಯದಲ್ಲಿ ಬದಲಾವಣೆಯಾಗಿದ್ದು, ಏ.14ರಂದು ಸಂಜೆ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಚುನಾವಣಾ ಸಂಚಾಲಕ ವಿ. ಸುನಿಲ್ ಕುಮಾರ್ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ‌ ಅವರ ಸ್ವಾಗತಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜುಗೊಂಡಿದೆ. ಮೋದಿ ಅವರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 7.30ಕ್ಕೆ ಬಂದು ಅಲ್ಲಿಂದ ವಾಹನದಲ್ಲಿ ನಾರಾಯಣ ಗುರು ವೃತ್ತಕ್ಕೆ ಬರಲಿದ್ದಾರೆ.‌ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ರೋಡ್ ಶೋ ಆರಂಭವಾಗಲಿದೆ. ಲಾಲ್ ಬಾಗ್, ಬಳ್ಳಾಲ್ ಬಾಗ್, ಪಿವಿಎಸ್ ವೃತ್ತದ ಮಾರ್ಗವಾಗಿ ನವ ಭಾರತ್ ವೃತ್ತದಲ್ಲಿ ರೋಡ್ ಶೋ ಕೊನೆಗೊಳ್ಳಲಿದೆ.‌ ಸಾರ್ವಜನಿಕರು, ಕಾರ್ಯಕರ್ತರು, ಸಂಜೆ 6.30 ರ ಒಳಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಬಂದು ನಿಂತಿರಬೇಕು ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT