ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮನೆಯೊಳಗೆ ‘ಮೋದಿ ಮಂದಿರ’ ನಿರ್ಮಿಸಿಕೊಂಡ ಅಭಿಮಾನಿ

Published 6 ಏಪ್ರಿಲ್ 2024, 13:43 IST
Last Updated 6 ಏಪ್ರಿಲ್ 2024, 13:43 IST
ಅಕ್ಷರ ಗಾತ್ರ

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೂ ಪ್ರಧಾನಿ ಆಗಲಿ ಎಂದು ಅರುಣ ವೆರ್ಣೇಕರ ಎಂಬ ಅಭಿಮಾನಿಯೊಬ್ಬರು ನಗರದ ಸೋನಾರಾವಾಡದಲ್ಲಿನ ತಮ್ಮ ಮನೆಯಲ್ಲಿ ‘ಮೋದಿ ಮಂದಿರ’ ನಿರ್ಮಿಸಿದ್ದಾರೆ.

ಮೋದಿಯವರ ಮೂರ್ತಿ ಜೊತೆಗೆ, ಮನೆಯ ಕೋಣೆಯ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಅಂಟಿಸಿದ್ದಾರೆ.

‘ನಾಲ್ಕು ದಿನದ ಹಿಂದೆ ಮಂದಿರ ನಿರ್ಮಿಸಿದ್ದೇನೆ. ಮೋದಿ ಅವರ ಭಾಷಣ ತಪ್ಪದೇ ಆಲಿಸುತ್ತೇನೆ. ಅವರು ಮತ್ತೆ ಪ್ರಧಾನಿ ಆಗಲೆಂದು ನಿತ್ಯ ಎರಡು ಸಲ ಪೂಜಿಸುತ್ತೇನೆ. ಮೂರ್ತಿ, ಮಂದಿರ ನಿರ್ಮಿಸಲು ₹20 ಸಾವಿರ ವೆಚ್ಚವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT