ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಲಕ್ಷ್ಮೀ ಬಾಂಡ್‍ ಏಕೆ ನಿಲ್ಲಿಸಿದ್ದೀರಿ?: ಯಡಿಯೂರಪ್ಪ

Published 2 ಮೇ 2024, 13:26 IST
Last Updated 2 ಮೇ 2024, 13:26 IST
ಅಕ್ಷರ ಗಾತ್ರ

ಆನವಟ್ಟಿ: ‘ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆಯಿಂದ ಆ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಹಣ ಸಿಗುತ್ತಿದೆ. ಇಂತಹ ಯೋಜನೆಯನ್ನು ಏಕೆ ನಿಲ್ಲಿಸಿದ್ದೀರಿ ಸಿದ್ದರಾಮಯ್ಯನವರೇ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅಕ್ರೋಶಭರಿತರಾಗಿ ಪ್ರಶ್ನಿಸಿದರು.

ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮತಯಾಚನೆಯ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಿಸಾನ್‍ ಸನ್ಮಾನ್‍ ಸೇರಿ ನಾನು ಜಾರಿಗೆ ತಂದಿರುವ ಬಹುತೇಕ ಯೋಜನೆಗಳನ್ನು ನಿಲ್ಲಿಸಿದ್ದೀರಿ. ಗ್ಯಾರಂಟಿ ಹೆಸರಲ್ಲಿ ಸರ್ಕಾರ ದಿವಾಳಿಯಾಗಿದೆ’ ಎಂದು ಕುಟುಕಿದರು.

ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ವಿಧಾನ ಪರಿಷತ್‍ ಸದಸ್ಯರಾದ ಭಾರತಿ ಶೆಟ್ಟಿ, ಡಿ.ಎಸ್‍.ಅರುಣ್‌ಕುಮಾರ್, ಮುಖಂಡರಾದ ರಘು ಕೌಟಿಲ್ಯ, ಟಿ.ಡಿ. ಮೇಘರಾಜ್‍ ಅವರು ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದರು.

ಆನವಟ್ಟಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ನೇರಲಗಿ, ಮುಖಂಡರಾದ ಪ್ರಕಾಶ್ ತಲಕಾಲಕೊಪ್ಪ, ಎಂ.ಡಿ.ಉಮೇಶ್, ರಾಜು ತಲ್ಲೂರು, ಪ್ರಕಾಶ್ ಅಗಸನಹಳ್ಳಿ, ಶಿವನಗೌಡ, ಕೆರಿಯಪ್ಪ, ವಿಶ್ವನಾಥ, ಬಿ.ಎಚ್‍. ಕೃಷ್ಣಮೂರ್ತಿ, ರಾಜು ಬಡಗಿ, ಗೀತಾ ಮಲ್ಲಿಕಾರ್ಜುನ್‍, ಮಲ್ಲಿಕಾರ್ಜುನ್‍ ವೃತ್ತಿಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT