ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ರೋಡ್ ಶೋ

Published 5 ಮೇ 2023, 8:31 IST
Last Updated 5 ಮೇ 2023, 8:31 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ನಟ ಸುದೀಪ್ ಅವರು ಶುಕ್ರವಾರ ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಿ.ಎಸ್.ನಿರಂಜನಕುಮಾರ್ ಮತ್ತು ವಿ.ಸೋಮಣ್ಣ ಪರ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಸುದೀಪ್ ಜೊತೆಗಿದ್ದರು.

ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಾಯಕನನ್ನ ಕಂಡು ಯುವಕರು ಕುಣಿದು ಕುಪ್ಪಳಿಸಿದರು.

ರೋಡ್ ಶೋ ಉದ್ದಕ್ಕೂ ಸುದೀಪ್ ಅಭಿಮಾನಿಗಳತ್ತ ಕೈ ಬೀಸಿದರು. ಅಭಿಮಾನಿಗಳು ನೆಚ್ಚಿನ ನಟನಿಂದ ಹಸ್ತಾಕ್ಷರ ಪಡೆಯಲು ಹರಸಾಹಸ ಪಟ್ಟರು. ನಾಯಕ ನಟನನ್ನು ನೋಡಲು ಕಾತರದಿಂದ ಲಾರಿಗಳ ಮೇಲೆಲ್ಲ ನಿಂತಿದ್ದರು. ಹೆಚ್ಚಿನ ಜನರು ಸೇರಿದ್ದರಿಂದ ಗಂಟೆ ಕಾಲ ಸಂಚಾರ ವ್ಯತ್ಯಯವಾಯಿತು.

ಪಟ್ಟಣದ ಮಡಹಳ್ಳಿ ವೃತ್ತದ ಬಳಿ ಬಂದ ಸುದೀಪ್ ಅವರನ್ನು ಬಿಜೆಪಿ ಅಭ್ಯರ್ಥಿ ನಿರಂಜನ ಕುಮಾರ್ ಮತ್ತು ಬೆಂಬಲಿಗರು ಸ್ವಾಗತಿಸಿ ಬರಮಾಡಿಕೊಂಡರು. ನಟ ಸುದೀಪ್ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಅವರೊಟ್ಟಿಗೆ ತೆರೆದ ಪ್ರಚಾರ ವಾಹನ ವೇರುತ್ತಿದ್ದಂತೆ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಕೇಕೆ ಶಿಳ್ಳೆ ಚಪ್ಪಾಳೆ ಹಾಕುವ ಮೂಲಕ ಸಂಭ್ರಮಿಸಿದರು.

ಬಳಿಕ ಮಾತನಾಡಿದ ಸುದೀಪ್, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ನಿರಂಜನ ಕುಮಾರ್ ಗೆಲ್ಲಿಸುವಂತೆ ಕರೆ ಕೊಟ್ಟರು

'ನಾನು ಚಿತ್ರರಂಗದಲ್ಲಿ ಇವತ್ತು ಬಣ್ಣಹಚ್ಚಲು ನಿಮ್ಮ ಈ ಪ್ರೀತಿ ಅಭಿಮಾನವೇ ಕಾರಣ. ನಿಮ್ಮ ಈ ಋಣವನ್ನು ನಾನೆಂದಿಗೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಈ ಜಯಘೋಷಗಳನ್ನು ಸಹೋದರ ನಿರಂಜನ ಗೆಲುವಿನಲ್ಲಿ ನೋಡಲು ಬಯಸುತ್ತೇನೆ' ಎಂದರು.

ಪ್ರಚಾರದ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಸುದೀಪ್ ತೆರಳಿದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಟಿ ಬೀಸಿದರು.

ಚಾಮರಾಜನಗರದಲ್ಲೂ ಅಬ್ಬರ: ಚಾಮರಾಜನಗರದಲ್ಲೂ ಸುದೀಪ್ ಸಚಿವ, ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಪ್ರಚಾರ ನಡೆಸಿದರು.

ಗುಂಡ್ಲುಪೇಟೆ ವೃತ್ತದಲ್ಲಿ ತೆರೆದ ವಾಹನ ಏರಿ, ಸೋಮಣ್ಣ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು.

ಸಂತೇರಮರಹಳ್ಳಿ ವೃತ್ತದಲ್ಲಿ ತಮ್ಮ ವಾಹನದ ಮೇಲೆ ಏರಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿದರು. ಸಚಿವ ವಿ.ಸೋಮಣ್ಣ ಅವರನ್ನೂ ತಮ್ಮ ಕಾರಿನ ಮೇಲೆ ಹತ್ತಿಸಿದ ಸುದೀಪ್, ಅವರ ಕೈಯನ್ನು ಮೇಲಕ್ಕೆತ್ತಿ ಬೆಂಬಲಿಸುವಂತೆ ಕೋರಿದರು.

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು: ಸಂತೇಮರಹಳ್ಳಿ ವೃತ್ತದ ಬಳಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ನಿಯಂತ್ರಣಕ್ಕೆ ಪೊಲೀಸರು‌ ಲಘು ಲಾಠಿ ಪ್ರಹಾರ ನಡೆಸಿದರು.

ಜಾರಿದ ಸೋಮಣ್ಣ: ವಾಹನದ ಮೇಲೆ ಸುದೀಪ್ ಮತ್ತು ಸೋಮಣ್ಣ ನಿಂತಿದ್ದಾಗ ಅಭಿಮಾನಿಯೊಬ್ಬರು ವಾಹನದ ಮೇಲೆ ಹತ್ತಲು ಯತ್ನಿಸಿದರು. ಈ ಸಂದರ್ಭದಲ್ಲಿ ಸೋಮಣ್ಣ ಜಾರಿದರು. ತಕ್ಷಣ ಸುದೀಪ್ ಅಂಗರಕ್ಷಕರು ಅವರನ್ನು ಹಿಡಿದರು.

ಕೊಳ್ಳೇಗಾಲ ಮತ್ತು ಹನೂರು ಕ್ಷೇತ್ರದಲ್ಲೂ ಸುದೀಪ್ ರೋಡ್ ಶೋ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT