ಭಾನುವಾರ, ಫೆಬ್ರವರಿ 28, 2021
31 °C

ಕಿರುಚಿತ್ರ: ಯುವಕರ ಸೆಳೆಯುವ ‘3 ರೋಸಸ್‌’

ರಮೇಶ ಕೆ. Updated:

ಅಕ್ಷರ ಗಾತ್ರ : | |

Prajavani

ಯುವಕರನ್ನು ಸೆಳೆಯುವ ಉದ್ದೇಶದಿಂದ ಮೈಸೂರಿನ ವಿದ್ಯಾರ್ಥಿಗಳು ಸೇರಿಕೊಂಡು ನಿರ್ಮಿಸಿರುವ ಕಿರುಚಿತ್ರ ‘3 ರೋಸಸ್‌’.

ತಿಲಕ್ ಪೂನಾಡಹಳ್ಳಿ ಅವರು ಮೂರು ಪ್ರೇಮಕಥೆಗಳನ್ನು ಸೇರಿಸಿ 19.49 ನಿಮಿಷದ ಕಿರುಚಿತ್ರ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಮೂರು ಪಾತ್ರಗಳ ಪರಿಚಯ ಮಾಡಿಸಿ ನಂತರ ಕ್ಲೈಮ್ಯಾಕ್ಸ್‌ ತೋರಿಸಿದ್ದಾರೆ.

ಹುಡುಗನೊಬ್ಬ ಹುಡುಗಿಯ ಹಿಂದೆ ಹೋಗಿ ಪ್ರೇಮ ನಿವೇದಿಸುವುದು, ಕೇರಳ ಹುಡುಗಿಯನ್ನು ಪ್ರೀತಿಯಲ್ಲಿ ಬೀಳಿಸಿಕೊಂಡ ಮತ್ತೊಬ್ಬ ಯುವಕ. ಪ್ರಿಯತಮನ ಭವಿಷ್ಯಕ್ಕಾಗಿ ಲವ್‌ ಬ್ರೇಕಪ್‌ ಮಾಡಿಕೊಳ್ಳುವ ಹುಡುಗಿ ಮತ್ತೊಂದು ಕಡೆ.... ನಾನ್‌ ಲೀನಿಯರ್‌ ಶೈಲಿಯಲ್ಲಿ ಕಿರುಚಿತ್ರ ಸಾಗುತ್ತದೆ. ರಿಯಲಿಸ್ಟಿಕ್‌ ಆಗಿ ಮೂಡಿಬಂದಿದೆ. ಕೆಲವು ಕಡೆ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಉಳಿದಂತೆ ಚಿತ್ರ ಕುತೂಹಲ ಮೂಡಿಸುತ್ತದೆ.

ಮೈಸೂರು ಹಾಗೂ ಕೊಡಗಿನ ಕೆಲವು ಸುಂದರ ಸ್ಥಳಗಳಲ್ಲಿ ಏಳು ದಿನಗಳ ಕಾಲ ಚಿತ್ರೀಕರಣಗೊಂಡಿದೆ. ಅರ್ಜುನ್‌ ಪಾತ್ರ ಮಾಡಿರುವ ಕಾರ್ತಿಕ್‌ ಅವರು, ನಟನಾದಲ್ಲಿ ರಂಗ ತರಬೇತಿ ಪಡೆದವರು. ಕಿರುಚಿತ್ರದಲ್ಲೂ ಅವರ ಅಭಿನಯ ಗಮನ ಸೆಳೆಯುತ್ತದೆ.

ವಿದ್ಯಾರ್ಥಿ ಅಂಕಿತ್‌ ಚೌಧರಿ ಕ್ಯಾಮೆರಾ ಕೈಚಳಕ ಉತ್ತಮವಾಗಿದೆ. ದಿವಿನ್‌ ಶೆಟ್ಟಿ, ತಿಲಕ್‌ ಹಾಗೂ ಕಾರ್ತಿಕ್‌ ಅವರಿಗೆ ಜೊತೆಯಾಗಿ ಲೀಲಾವತಿ (ಖುಷಿ), ನಿಹಾರಿಕಾ ಮುತ್ತಪ್ಪ (ಸುಚಿ), ಪ್ರಜ್ಞಾ ‍ಪೂವಮ್ಮ (ಅದ್ವಿಕಾ) ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಫಿಲ್ಮ್‌ ಡೈರೆಕ್ಷನ್‌ ಡಿಪ್ಲೊಮಾ ಮಾಡಿರುವ ತಿಲಕ್ ಪೂನಾಡಹಳ್ಳಿ, ‘ಸಿಂಪಲ್ಲಾಗ್‌ 2 ಲವ್‌ ಸ್ಟೋರಿ’ ಕಿರುಚಿತ್ರ ನಿರ್ದೇಶಿಸಿದ ಅನುಭವ ಹೊಂದಿದ್ದಾರೆ. ‘3 ರೋಸಸ್‌’ನಲ್ಲೂ ಕೇರಳ ಹುಡುಗಿ ಲವರ್‌ ಆಗಿ ನಟಿಸಿದ್ದಾರೆ.

‘ಮನರಂಜನೆ ಹಾಗೂ ಯುವಕರನ್ನು ಉದ್ದೇಶವಾಗಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಪ್ರೇಮಕಥೆಯನ್ನು ಆಧರಿಸಿದ ಬಹಳಷ್ಟು ಕಿರುಚಿತ್ರಗಳನ್ನು ಮಾಡಿದ್ದಾರೆ. ಆದರೆ ನಾವು ಮೂರು ಕಥೆಗಳನ್ನು ಒಟ್ಟು ಸೇರಿಸಿ ಹೊಸ ಪ್ರಯತ್ನಕ್ಕೆ ಕೈಹಾಕಿದೆವು. ಕೆಲ ನಿರ್ಮಾಪಕರಿಗೂ ತೋರಿಸಿದ್ದೇವೆ’ ಎಂದು ತಿಲಕ್‌ ಹೇಳುತ್ತಾರೆ. 

ಯೂಟ್ಯೂಬ್‌ನಲ್ಲಿ ಕಿರುಚಿತ್ರ ನೋಡಲು: WDU4UcTg4T8

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು