ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಪ್ರಶಸ್ತಿ ಬಾಚಿದ ‘69 ವ್ಯೂಸ್‌’; ಸೆ. 9ರಂದು ಒಟಿಟಿಯಲ್ಲಿ ಲಭ್ಯ

Last Updated 7 ಸೆಪ್ಟೆಂಬರ್ 2022, 8:19 IST
ಅಕ್ಷರ ಗಾತ್ರ

ಯುವ ನಿರ್ದೇಶಕ ಹರಿಪ್ರಕಾಶ್ ಕಿರುಚಿತ್ರ ನಿರ್ಮಾಣದಪ್ರಥಮ ಹೆಜ್ಜೆಯಲ್ಲೇ ಯಶಸ್ಸು ಸಾಧಿಸಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘69 ವ್ಯೂಸ್‌’ ಎಂಬ ಕಿರುಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ದಾಖಲೆ ಬರೆದಿದೆ.

ದೇಶ-ವಿದೇಶಗಳಲ್ಲಿ ನಡೆದ ಹಲವಾರು ಕಿರುಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿರುವ ‘69 ವ್ಯೂಸ್‌’ ಈವರೆಗೂ ಇಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಂಕಲನ, ಚಿತ್ರಕಥೆ, ನಿರ್ದೇಶನ ವಿಭಾಗ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡಿದೆ. ಭಾರತ ಸೇರಿದಂತೆ ಪ್ಯಾರೀಸ್ ಹಾಗೂ ಫ್ರೆಂಚ್‌ ಮೊದಲಾದ ದೇಶಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಸೆಪ್ಟೆಂಬರ್ 9ರಿಂದ ಅಮೆಜಾನ್ ಪ್ರೈಮ್, ಟಾಟಾ ಪ್ಲೇ ಬಿಂಜ್, ಏರ್‌ಟೆಲ್‌ ಎಕ್ಸ್‌ಟ್ರೀಮ್‌ ಹಾಗೂ ನಮ್ಮ ಫ್ಲಿಕ್ಸ್ ಓಟಿಟಿ ಆ್ಯಪ್ ಮೂಲಕ ಈ ಚಿತ್ರ ಬಿಡುಗಡೆಯಾಗಲಿದೆ.

ಸ್ವಾಮಿ ಮೈಸೂರು ಛಾಯಾಗ್ರಹಣ, ಪುಷ್ಕರ್ ಗಿರಿಗೌಡ ಸಂಕಲನ, ಆನಂದ್ ರಾಜಾ ವಿಕ್ರಮ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಕಿರುಚಿತ್ರ 26 ನಿಮಿಷಗಳ ಅವಧಿಯಿದೆ. ದೃಶ್ಯಗಳಲ್ಲಿ ಸಿನಿಮಾ ಗುಣಮಟ್ಟವನ್ನು ಕಾಯ್ದುಕೊಂಡಿದೆ. ನೀರಿನೊಳಗೂ ಶೂಟಿಂಗ್ ಮಾಡಿರುವುದು ಈ ಕಿರುಚಿತ್ರದ ಮತ್ತೊಂದು ಹೈಲೈಟ್.

ಪ್ರಿಯಾಂಕಾ ಕೆ. ನಿರ್ಮಿಸಿರುವ ಈ ಕಿರುಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಶಶಾಂಕ್ ಶರ್ಮಾ, ರೋವನ್ ಪೂಜಾರಿ, ನಳೀನ್ ಅರಕಲ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT