ಸೋಮವಾರ, ಅಕ್ಟೋಬರ್ 3, 2022
21 °C

ಎರಡೇ ತಿಂಗಳಲ್ಲಿ ಲಲಿತ್ ಮೋದಿ–ಸುಶ್ಮಿತಾ ಸೇನ್ ಡೇಟಿಂಗ್‌ನಲ್ಲಿ ಬಿರುಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದಲ್ಲಿ ಇಂಡಿಯನ್ ಪ್ರಿಮೀಯರ್ ಲಿಗ್‌ ಅನ್ನು (ಐಪಿಎಲ್‌)  ಹುಟ್ಟುಹಾಕಿದ್ದ ಉದ್ಯಮಿ ಹಾಗೂ ಈಗ ತೆರಿಗೆ ವಂಚನೆ ಪ್ರಕರಣದಲ್ಲಿ ಭಾರತ ತೊರೆದು ವಿದೇಶದಲ್ಲಿರುವ ಲಲಿತ್ ಮೋದಿ, ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ ಕಳೆದ ಎರಡು ತಿಂಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು.

ಇದೀಗ ಲಲಿತ್ ಮೋದಿ–ಸೇನ್ ಸಂಬಂಧ ಮುರಿದು ಬಿದ್ದಿತೆ ಎಂಬ ಅನುಮಾನಗಳು ಮೂಡಿವೆ. ನೆಟ್ಟಿಗರು ಸುಶ್ಮಿತಾ ಸೇನ್ ಜೊತೆ ಲಲಿತ್ ಮೋದಿ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ.

ಇದಕ್ಕೆ ಕಾರಣ ಲಲಿತ್ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಶ್ಮಿತಾ ಸೇನ್ ಹೆಸರನ್ನು ಅಳಿಸಿ ಹಾಕಿದಾರೆ ಅಲ್ಲದೇ ಅವರ ಜೊತೆ ಇದ್ದ ಡಿಪಿ ಕೂಡ ನಾಪತ್ತೆಯಾಗಿದೆ. ಬದಲಿಗೆ ತಮ್ಮ ಹೆಸರು ಮಾತ್ರ ಉಳಿಸಿಕೊಂಡು ತಾವಷ್ಟೇ ಇರುವ ಫೋಟೊ ಹಾಕಿಕೊಂಡಿದ್ದಾರೆ.

ಜುಲೈ 14 ರಂದು ಟ್ವೀಟ್ ಮಾಡಿದ್ದ ಲಲಿತ್ ಮೋದಿ , ‘ಇವಾಗ ತಾನೇ ಮಾಲ್ಡೀವ್ಸ್ ವಿದೇಶ ಪ್ರವಾಸ ಮುಗಿಸಿ ಲಂಡನ್‌ಗೆ ಬಂದೆ, ಇಗೋ ನಿಮಗೆ ಈ ವಿಷಯ ತಿಳಿಸುತ್ತಿದ್ದೇನೆ. ಇದು ನನ್ನ ಹೊಸ ಜೀವನ, ಇಲ್ಲಿಂದ ಹೊಸ ಬಾಳ ಪಯಣ, ನನ್ನ ಬಾಳಲ್ಲಿ ಬಂದ ಪೂರ್ಣಚಂದಿರ’ ಎಂದು ಟ್ವೀಟ್ ಮಾಡಿ ಸುಶ್ಮಿತಾ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದರು.

‘ಅಲ್ಲದೇ ಸದ್ಯ ನಾವಿಬ್ಬರು ಇದೀಗ ಡೇಟಿಂಗ್‌ನಲ್ಲಿ ಮಾತ್ರ ಇದ್ದೇವೆ. ಮದುವೆ ಕೂಡ ಆಗಲಿದ್ದೇವೆ, ಆ ದಿನ ಮುಂದೆ ಬರುತ್ತೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ 2010 ರಲ್ಲಿ ಪಲಾಯನಗೈದಿರುವ ಲಲಿತ್ ಮೋದಿ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಇನ್ನು 1994 ರಲ್ಲಿ ಭುವನ ಸುಂದರಿಯಾಗಿದ್ದ ಹಾಗೂ ಬಾಲಿವುಡ್‌ನಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಸುಶ್ಮಿತಾ ಸೇನ್ ಈ ಸಂಬಂಧದ ಬಗ್ಗೆ ಒಪ್ಪಿಗೆ ಸೂಚಿಸಿದ್ದರು. ಇದೀಗ ಇಬ್ಬರ ಸಂಬಂಧದ ಮುರಿದಿರುವ ಗಾಳಿಸುದ್ದಿ ಬಗ್ಗೆ ಅವರು ಮೌನ ಮುರಿದಿಲ್ಲ.

ಇನ್ನು ಸುಶ್ಮಿತಾ ಸೇನ್ ಅವರಿಗೆ ಈಗಾಗಲೇ ಎರಡು ದತ್ತು ಮಕ್ಕಳಿದ್ದಾರೆ. 2018 ರಿಂದ 2021ರವರೆಗೆ ಅವರು ಗಾಯಕ ರೋಹಮನ್ ಶಾವಲ್ ಜೊತೆ ಡೇಟಿಂಗ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು