ಮಂಗಳವಾರ, ಜುಲೈ 27, 2021
28 °C

ತೆರೆ ಮೇಲೆ ಅಮೀರ್‌ –ಸೈಫ್‌ ಕಳ್ಳ ಪೊಲೀಸ್‌ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳಿನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ‘ವಿಕ್ರಮ ವೇದ’ ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ. ಈ ರಿಮೇಕ್‌ ಚಿತ್ರದಲ್ಲಿ ಅಮೀರ್ ಖಾನ್‌ ಹಾಗೂ ಸೈಫ್‌ ಅಲಿ ಖಾನ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ದಿಲ್‌ ಚಾಹ್ತಾ ಹೈ ಸಿನಿಮಾ ನಂತರ ಈ ಜೋಡಿ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು.

‘ವಿಕ್ರಮ ವೇದ’ ಮೂಲ ಸಿನಿಮಾದಲ್ಲಿ ವಿಕ್ರಂ ಪಾತ್ರದಲ್ಲಿ ಮಾಧವನ್‌ ಹಾಗೂ ವೇದ ಪಾತ್ರದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದರು. ಈ ಎರಡೂ ಪಾತ್ರಗಳಿಗೂ ಪ್ರಶಂಸೆಯ ಸುರಿಮಳೆಯೇ ಸಿಕ್ಕಿತ್ತು. ಕನ್ನಡದ ನಟಿ ಶ್ರದ್ಧಾ ಶ್ರೀನಾಥ್‌ ಅವರಿಗೂ ಈ ಸಿನಿಮಾ ಬ್ರೇಕ್ ನೀಡಿತ್ತು.

ಸೈಫ್‌ ಅಲಿ ಖಾನ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಖಳನಾಯಕನಾಗಿದ್ದರೂ ಎಲ್ಲರ ಮನಸ್ಸು ಗೆಲ್ಲುವ ಪಾತ್ರದಲ್ಲಿ ಅಮೀರ್ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಿದೆ. ಈ ಸಿನಿಮಾವನ್ನು ಶಾರುಕ್‌ ಖಾನ್ ರಿಮೇಕ್‌ ಮಾಡಲು ಇಚ್ಛಿಸಿದ್ದರು. ಹಾಗೇ ಸೇತುಪತಿ ನಿರ್ವಹಿಸಿದ ವೇದ ಪಾತ್ರ ಮಾಡಲು ಅವರಿಗೆ ಇಷ್ಟವಿತ್ತಂತೆ. ಆದರೆ ಈಗ ಅಮೀರ್‌ ಹಾಗೂ ಸೈಫ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ.

ಕಳ್ಳ, ಪೊಲೀಸ್ ಆಟದ ನಡುವೆ ವೇದ ಹಾಗೂ ವಿಕ್ರಂ ಒಟ್ಟಿಗೆ ತೆರೆಯ ಮೇಲೆ ಕಾಣಿಸುವ ದೃಶ್ಯಗಳು ಸಾಕಷ್ಟು ಜನಪ್ರಿಯ ಆಗಿತ್ತು. ಅವರ ನಡುವಿನ ಡೈಲಾಗ್‌ ಹಾಗೂ ಮಾತಿನ ಚಾಟಿ, ಥ್ರಿಲ್ಲರ್‌ ಸಿನಿಮಾ ಪ್ರಿಯರ ಮನಸ್ಸು ಗೆದ್ದಿದ್ದವು. ಸುಮಾರು ₹11 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ತಯಾರಿಸಲಾಗಿತ್ತು. ವಿಶ್ವದಾದ್ಯಂತ ₹50 ಕೋಟಿ ಗಳಿಕೆ ಮಾಡಿತ್ತು.

ತಮಿಳಿನಲ್ಲಿ ಸಿನಿಮಾ ನಿರ್ದೇಶಿಸಿದ್ದ ಪುಷ್ಕರ್‌ ಗಾಯತ್ರಿ ಅವರೇ ಈ ಸಿನಿಮಾಕ್ಕೂ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ವೈನಾಟ್‌ ಸ್ಟುಡಿಯೊ ಹಾಗೂ ನೀರಜ್‌ ಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ಶೂಟಿಂಗ್‌ ಆರಂಭವಾಗಲಿದ್ದು, 2020ರ ಜೂನ್‌ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು