ಸೋಮವಾರ, ಡಿಸೆಂಬರ್ 5, 2022
21 °C

‘ಅಬಜಬದಬ’ದಲ್ಲಿದ್ದಾರಾ ಶಂಕರ್‌ನಾಗ್‌!?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಸ್. ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಮಯೂರ ರಾಘವೇಂದ್ರ ನಿರ್ದೇಶನದ ‘ಅಬಜಬದಬ’ ಚಲನಚಿತ್ರ ಶೇ 80 ಚಿತ್ರೀಕರಣ ಮುಗಿಸಿದೆ. 2 ಹಾಡು ಹಾಗೂ ಒಂದು ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಇದೀಗ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಶಂಕರ್‌ನಾಗ್‌ ಈಸ್‌ ಬ್ಯಾಕ್‌ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. 

‘ಅಬಜಬದಬ’ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಮುಖ್ಯ ವಿಶೇಷತೆ ಎಂದರೆ ನಮ್ಮ ಕರಾಟೆ ಕಿಂಗ್ ‘ಶಂಕರ್ ನಾಗ್’ ಅವರನ್ನು ಮತ್ತೆ ತೆರೆ ಮೇಲೆ ಕರೆತರುತ್ತಿರುವುದು. ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸ ಪ್ರಾರಂಭವಾಗಿದೆ. ಮುಂದಿನ ವರ್ಷ ನಮ್ಮ ಶಂಕರ್‌ನಾಗ್‌ ಅವರನ್ನು ತೆರೆ ಮೇಲೆ ನೋಡಿ ಆನಂದಿಸಬಹುದು’ ಎಂದಿದೆ ಚಿತ್ರತಂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು