ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ತಮಾಷೆಯ ನಡೆಗಳಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದೀಗ ‘ಏಪ್ರಿಲ್ ಫೂಲ್’ ಭಾಗವಾಗಿ ತಮ್ಮದೇ ಮಿಮ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಟ್ಟೆ ಬ್ರಾಂಡ್ ಫೋರ್ಸ್ ಐಎಕ್ಸ್‌ನ ಸಹ-ಸಂಸ್ಥಾಪಕ ಮನೀಶ್ ಮಂದಾನ ಅವರನ್ನು ತಮಾಷೆ ಮಾಡುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ವಿಡಿಯೊ ಕ್ಲಿಪ್‌ನ ಅಂತ್ಯದಲ್ಲಿ 'ಭಾಗಂ ಭಾಗ್' ಚಿತ್ರದ ಬಂಟಿ ಪಾತ್ರದ ಒಂದು ನೋಟವನ್ನು ಸೇರಿಸಿದ್ದಾರೆ. ಇದೀಗ ಆ ಕ್ಲಿಪ್ ಹೆಚ್ಚು ತಮಾಷೆಯ ವಿಷಯವಾಗಿದೆ.
ನಿಮ್ಮೆಲ್ಲರಿಗೂ ಪ್ರ್ಯಾಂಕ್ ಮಾಡಲು ಈ ವಿಡಿಯೊದಲ್ಲಿ ಕೆಲವು ಅಂಶಗಳು ನಿಮಗೆ ಸ್ಫೂರ್ತಿ ನೀಡುತ್ತದೆ. ನೀವು ಇಂದು ಪ್ರ್ಯಾಂಕ್ ಮಾಡಿ, ಬೇರೆ ಅವರನ್ನು ನೀವು ಹೇಗೆ ಪ್ರ್ಯಾಂಕ್ ಮಾಡಿದೀರಿ ತಿಳಿಸಿ ಎಂದು ಅಕ್ಷಯ್ ಬರೆದುಕೊಂಡಿದ್ದಾರೆ.
ಅಕ್ಷಯ್ ಮುಂಬರುವ 'ಬಡೆ ಮಿಯಾನ್ ಚೋಟೆ ಮಿಯಾನ್' ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ. 'ಓಎಂಜಿ 2', 'ಸೂರರೈ ಪೊಟ್ರು' 'ಕ್ಯಾಪ್ಸುಲ್ ಗಿಲ್' ಮತ್ತು 'ಹೇರಾ ಫೆರಿ 3' ಚಿತ್ರಗಳಲ್ಲಿ ನಟಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.