ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ದಿನವೇ ₹10.26 ಕೋಟಿ ಗಳಿಸಿದ ಅಕ್ಷಯ್‌ ಕುಮಾರ್‌ ಅಭಿನಯದ ‘ಓ ಮೈ ಗಾಡ್‌–2’

Published 12 ಆಗಸ್ಟ್ 2023, 13:59 IST
Last Updated 12 ಆಗಸ್ಟ್ 2023, 13:59 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮತ್ತು ಪಂಕಜ್‌ ತ್ರಿಪಾಠಿ ಅಭಿನಯಿಸಿರುವ ‘ಓ ಮೈ ಗಾಡ್‌–2’ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ₹10.26 ಕೋಟಿಯನ್ನು ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

ಅಮಿತ್‌ ರೈ ಬರೆದು ನಿರ್ದೇಶಿಸಿರುವ ‘ಓ ಮೈ ಗಾಡ್‌–2’ ಚಿತ್ರದಲ್ಲಿ ತ್ರಿಪಾಠಿ ಶಿವ ಭಕ್ತನಾಗಿದ್ದು, ಕಾಂತಿ ಶರಣ್‌ ಮುದ್ಗಲ್‌ ಮತ್ತು ಕುಮಾರ್‌ ಅವರು ದೇವರ ಸಂದೇಶ ರವಾನಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾಮಿ ಗೌತಮ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

‘ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು, ‘ಓ ಮೈ ಗಾಡ್‌–2’ ಚಿತ್ರವು ಮೊದಲ ದಿನವೇ ₹10.26 ಕೋಟಿ ಸಂಗ್ರಹಿಸಿದೆ’ ಎಂದು ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಯಾಕಾಮ್‌18 ಸ್ಟುಡಿಯೋಸ್‌ ಪ್ರಸ್ತುತ ಪಡಿಸಿರುವ ‘ಓ ಮೈ ಗಾಡ್‌–2’ ಚಿತ್ರವನ್ನು ಕೇಪ್‌ ಆಫ್‌ ಗುಡ್‌ ಫಿಲ್ಮ್ಸ್‌ ಮತ್ತು ವಕಾವೂ ಕಂಪನಿ ನಿರ್ಮಿಸಿದೆ. ಈ ಚಿತ್ರವು ಹದಿಹರೆಯದವರ ವಿವಿಧ ಸಮಸ್ಯೆಗಳು ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಹೊಂದಿದೆ.

ಈ ಚಿತ್ರವು 2012ರಲ್ಲಿ ಬಿಡುಗಡೆಯಾದ ಕುಮಾರ್‌ ಮತ್ತು ಪರೇಶ್‌ ರಾವಲ್‌ ನಟಿಸಿರುವ 'OMG - ಓ ಮೈ ಗಾಡ್‌!’ನ ಮುಂದುವರಿದ ಆಧ್ಯಾತ್ಮಿಕ ಭಾಗ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT